ಭಾರತ, ಮಾರ್ಚ್ 19 -- ಬೆಂಗಳೂರು: ಗ್ರಾಮೀಣವಾಸಿಗಳಿಗೆ ಒಂದು ಶುಭ ಸುದ್ದಿ. ನಿಮ್ಮ ಹೆಸರಲ್ಲಿ ಸ್ವಂತ ಮನೆ, ನಿವೇಶನ ಏನೂ ಇಲ್ವಾ, ಹಾಗಾದರೆ ಸರ್ಕಾರದಿಂದ ವಸತಿ ಪಡೆಯಲು ನಿಮಗೆ ಇಲ್ಲೊಂದು ಸುವರ್ಣಾವಕಾಶ ಇದೆ. ನೀವು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರೇ, ವಸತಿ ರಹಿತರೇ, ನಿವೇಶನ ರಹಿತರೇ, ಹಾಗಾದರೆ ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ. ಮನೆ ಪಡೆಯುವುದಕ್ಕೆ ನಿಮಗೆ ಇದೀಗ ಸುವರ್ಣಾವಕಾಶ ಬಂದಿದೆ.

ಹೌದು, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಇರುವ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ ಕರ್ನಾಟಕದಲ್ಲಿ ಶುರುವಾಗಿದೆ. ಸರ್ವರಿಗೂ ಸೂರು ಒದಗಿಸಬೇಕು ಎಂಬ ಸದುದ್ದೇಶ ಹೊಂದಿರುವ ಈ ಸಮೀಕ್ಷೆಯಲ್ಲಿ ವಸತಿ ರಹಿತರು ಹಾಗೂ ನಿವೇಶನ ರಹಿತರು ನೇರವಾಗಿ ಪಾಲ್ಗೊಳ್ಳಬಹುದಾಗಿದೆ.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಓರ್ವ ಸರ್ವೇಕ್ಷಕರನ್ನು (ಸರ್ವೇಯರ್‌) ಇದಕ್ಕಾಗಿ ನಿಯೋಜಿಸಲಾಗಿದೆ.

ಆ ಸರ್ವೇಕ್ಷಕರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ...