ಭಾರತ, ಜುಲೈ 10 -- ಸದ್ಯ ಸ್ಮಾರ್ಟ್‌ಫೋನ್‌ ಜಗತ್ತಿನಲ್ಲಿ ಗ್ಯಾಲಕ್ಸಿ ಝೆಡ್ ಫೋಲ್ಡ್ 7 ಮತ್ತು ಗ್ಯಾಲಕ್ಸಿ ಝೆಡ್ ಫ್ಲಿಪ್ 7 ಗಳದ್ದೇ ಸದ್ದು. ಆಕರ್ಷಕ ವಿನ್ಯಾಸ, ಬಳಸಲೇಬೇಕು ಎನಿಸುವಂತಹ ಫೀಚರ್‌ಗಳು, ಕೆಲವು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಸೌಲಭ್ಯಗಳು ಈ ಫೋನ್‌ಗಳ ಕಡೆಗೆ ಸ್ಮಾರ್ಟ್‌ಫೋನ್ ಪ್ರಿಯರು ಗಮನಿಸುವಂತೆ ಮಾಡಿವೆ. ಬುಧವಾರ (ಜುಲೈ 9) ಈ ಬಗ್ಗೆ ಸ್ಯಾಮ್‌ಸಂಗ್ ಅಧಿಕೃತ ಘೋ‍ಷಣೆ ಮಾಡಿದೆ. ಸ್ಯಾಮ್‌ಸಂಗ್ ಮತ್ತು ಗೂಗಲ್‌ ಜತೆಯಾಗಿ ಹೊಸ ಮಡಚಬಹುದಾದ ಫೋನ್‌ಗಳಲ್ಲಿ ಐಎ ಫೀಚರ್‌ಗಳನ್ನು ಅಳವಡಿಸಿದ್ದು, ಬಳಕೆದಾರರಿಗೆ ವಿಶೇಷ ಅನುಭವ ನೀಡುವಂತೆ ಇದೆ. ಉನ್ನತೀಕರಿಸಿದ ಸರ್ಕಲ್‌ನಿಂದ ಹಿಡಿದು ಸರ್ಚ್‌ ಸಾಮರ್ಥ್ಯ, ಮಲ್ಟಿ ಟಾಸ್ಕಿಂಗ್‌ ತನಕ ಬಳಕೆದಾರರಿಗೆ ಹಿತಾನುಭವ ಉಂಟಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ವಿಶೇಷವಾಗಿ 5 ಎಐ ಚಾಲಿತ ಫೀಚರ್‌ಗಳು ಹೊಸ ಗ್ಯಾಲಕ್ಸಿ ಝೆಡ್ ಫೋಲ್ಡ್ 7 ಮತ್ತು ಗ್ಯಾಲಕ್ಸಿ ಝೆಡ್ ಫ್ಲಿಪ್ 7 ಬಳಕೆದಾರರಿಗೆ ಹೊಸ ಅನುಭವ ನೀಡಲಿವೆ.

1) ಜೆಮಿನಿ ಆನ್‌ಸ್ಕ್ರೀನ್ ಜಾಗೃತಿ ಮತ್ತು ಮಲ್ಟಿಟಾಸ್ಕಿಂಗ...