Bengaluru, ಏಪ್ರಿಲ್ 8 -- ಹಿಂದೂ ಧರ್ಮದ ಪವಾಡವೋ ಅಥವಾ ನಂಬಿಕೆಯೋ ತಿಳಿದಿಲ್ಲ. ಈ ದೇವಾಲಯದಲ್ಲಿರುವ ಗೋಪುರದ ಮಧ್ಯೆ ಹಾದು ಬಂದರೆ ನಿಮಗೆ ಪುನರ್‍‌ಜನ್ಮ ಇರುವುದಿಲ್ಲ, ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಪಂಚಭೂತ ಲಿಂಗಗಳಲ್ಲಿ ಒಂದಾಗಿರುವ ಅಗ್ನಿ ಲಿಂಗ, ಮೋಕ್ಷ ಮಾರ್ಗ ಮತ್ತು ಗಿರಿ ಪ್ರದರ್ಶನಕ್ಕೆಂದೆ ಹೆಸರುವಾಸಿಯಾಗಿರುವ ಈ ಅರುಣಾಚಲೇಶ್ವರ ದೇವಸ್ಥಾನ ಎಲ್ಲಿದೆ? ಏನಿದರ ವಿಶೇಷತೆ? ಎಂಬಿತ್ಯಾದಿ ಮಾಹಿತಿ ಇಲ್ಲಿ ವಿವರಿಸಲಾಗಿದೆ.

ದೇಶ ಸುತ್ತಿದರೆ ಉದ್ದಗಲಕ್ಕೂ ಸಿಗುವ ಹಲವು ಧಾರ್ಮಿಕ ಕೇಂದ್ರಗಳಲ್ಲಿ ತಮಿಳುನಾಡಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಾಸ್ಥಾನ ಒಂದು. 9ನೇ ಶತಮಾನದಲ್ಲಿ ಚೋಳರು ನಿರ್ಮಿಸಿದ ದೇವಾಲಯವನ್ನು ಅಗ್ನಿ ಪ್ರತೀಕವೆಂದು ಕರೆಯಲಾಗುತ್ತದೆ. ಹಿಂದೂ ದೇವಾಲಯಗಳ ಪೈಕಿ ಅತಿ ದೊಡ್ಡ ದೇವಾಲಯವೆಂಬ ಖ್ಯಾತಿ ಪಡೆದಿರುವ ಈ ಶಿವ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಮಹಾನ್ ಆಧ್ಯಾತ್ಮಿಕ ಸಾಧಕ ಶ್ರೀ ರಮಣ ಮಹರ್ಷಿಗಳು ಓಡಾಡಿದ, ತಪಸ್ಸು ಮಾಡಿ...