ಭಾರತ, ಜುಲೈ 21 -- ಈ ಪ್ರಪಂಚದಲ್ಲಿ ಸ್ವಾರ್ಥ, ದುರಾಸೆ ಇಲ್ಲದ ಒಂದೇ ಒಂದು ಸುಂದರ, ಸಂಬಂಧ ಸ್ನೇಹ. ಸ್ನೇಹದಲ್ಲಿ ನಾನು ಎಂಬ ಅಹಂ ಇಲ್ಲ, ನನ್ನದು ಎಂಬ ದುರಾಸೆ ಇಲ್ಲ. ನಾನು ನೀನು ದೋಸ್ತಿ, ಸ್ನೇಹವೇ ನಮ್ಮ ಆಸ್ತಿ ಎಂಬ ಭಾವವಷ್ಟೇ ಸ್ನೇಹಕ್ಕೆ ಅಡಿಪಾಯ. ಇಂತಹ ಸುಂದರ ಸಂಬಂಧವನ್ನು ಸಂಭ್ರಮಿಸಲೂ ಒಂದು ದಿನವಿದೆ. ಈ ದಿನವನ್ನು ಫ್ರೆಂಡ್‌ಶಿಪ್‌ ಡೇ ಎಂದು ಕರೆಯುತ್ತಾರೆ.

ಸ್ನೇಹಿತರ ದಿನವನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ಆಚರಿಸುತ್ತಾರೆ. ಹಾಗಾದರೆ ಭಾರತದಲ್ಲಿ ಫ್ರೆಂಡ್‌ಶಿಪ್‌ ಡೇ ಯಾವಾಗ? ಸ್ನೇಹಿತರ ದಿನವನ್ನು ಆಚರಿಸುವ ಉದ್ದೇಶವೇನು, ಈ ದಿನದ ಇತಿಹಾಸ ಹಿನ್ನೆಲೆಯೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರತಿ ವರ್ಷ ಆಗಸ್ಟ್‌ ಮೊದಲ ಭಾನುವಾರ (ಇಂದು) ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್‌ 3ರಂದು ಫ್ರೆಂಡ್‌ಶಿಪ್‌ ಡೇ ಇದೆ.

20ನೇ ಶತಮಾನದ ಆರಂಭದಲ್ಲಿ ಹಾಲ್‌ಮಾರ್ಕ್‌ ಕಾರ್ಡ್‌ಗಳು ಮತ್ತು ಅದರ ಸೃಷ್ಟಿಕರ್ತ ಜಾಯ್ಸ್‌ ಹಾಲ್‌ ಸ್ನೇಹವನ್ನು ಸ್ಮರಿಸಲು ಒಂದು ದಿನ ಬೇಕು ಎಂಬ ಉದ್ದೇಶದಿಂದ ...