ಭಾರತ, ಏಪ್ರಿಲ್ 29 -- ಫ್ಯಾಮಿಲಿ ಮ್ಯಾನ್ 3 ವೆಬ್ ಸರಣಿಯ ಮೂಲಕ ಹೆಸರು ಗಳಿಸಿದ್ದ ನಟ ರೋಹಿತ್ ಬಾಸ್ಫೋರ್ ಅಸ್ಸಾಂನ ಗುವಾಹಟಿಯ ಗರ್ಭಂಗ ಜಲಪಾತದ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಭಾನುವಾರ (ಏಪ್ರಿಲ್ 27) ಸಂಜೆ ಈ ಘಟನೆ ನಡೆದಿದೆ. ಅಂದು ಮಧ್ಯಾಹ್ನ 12.30ರ ಸುಮಾರಿಗೆ ರೋಹಿತ್ ಮನೆಯಿಂದ ಹೊರಟು ಸ್ನೇಹಿತರ ಜೊತೆ ಪಿಕ್ನಿಕ್‌ಗೆ ತೆರಳಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರೋಹಿತ್ 9 ಮಂದಿ ಸ್ನೇಹಿತರ ಜೊತೆ ಪಿಕ್ನಿಕ್‌ಗೆ ಹೋಗಿದ್ದರು. ಮಧ್ಯಾಹ್ನ ಸುಮಾರು 2 ಗಂಟೆ ಹೊತ್ತಿಗೆ ಈ ಘಟನೆ ನಡೆದಿರಬಹುದು ಎಂದು ರಾಣಿ ಪೊಲೀಸ್ ಔಟ್‌ಪೋಸ್ಟ್ ಅಧಿಕಾರಿಗಳು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
'ಸಂಜೆ 4 ಗಂಟೆ ಸುಮಾರಿಗೆ ನಮಗೆ ಘಟನೆ ಬಗ್ಗೆ ಮಾಹಿತಿ ಸಿಕ್ಕಿತ್ತು ಮತ್ತು 4.30ರ ಹೊತ್ತಿಗೆ ನಾವು ಸ್ಥಳಕ್ಕೆ ತಲುಪಿದ್ದೆವು. ನಂತರ ಎಸ್‌ಡಿಆರ್‌ಎಫ್ ತಂಡ ಸಂಜೆ 6.30 ರ ಸುಮಾರಿಗೆ ಶವವನ್ನು ಹೊರತೆಗೆದಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿದೆ.
ಮೂಲಗಳ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.