ಭಾರತ, ಮಾರ್ಚ್ 10 -- ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಗೆಲುವಿನ ನಂತರ ತಮ್ಮ ಸ್ನೇಹಿತ ಕೇನ್ ವಿಲಿಯಮ್ಸನ್ ಅವರನ್ನು ಮರೆಯದ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಗಾಯದಿಂದಾಗಿ ಭಾನುವಾರ ಪಂದ್ಯದ 2ನೇ ಇನ್ನಿಂಗ್ಸ್​​ನಲ್ಲಿ ಮೈದಾನಕ್ಕಿಳಿಯದ ಬ್ಲ್ಯಾಕ್ ಕ್ಯಾಪ್ಸ್ ಬ್ಯಾಟ್ಸ್​ಮನ್​ಗೆ ಹೃತ್ಪೂರ್ವಕ ಸಂದೇಶವನ್ನು ಕಳುಹಿಸಿದ್ದಾರೆ.

ಫೈನಲ್​ನಲ್ಲಿ ನ್ಯೂಜಿಲೆಂಡ್ ಪರ ಪ್ರಮುಖ ಬ್ಯಾಟರ್​ ವಿಲಿಯಮ್ಸನ್, ಭಾರತ ವಿರುದ್ಧದ ಕೊನೆಯ ಗ್ರೂಪ್ ಹಂತದ ಪಂದ್ಯದಲ್ಲಿ ಕಠಿಣ ದುಬೈ ಟ್ರ್ಯಾಕ್​ನಲ್ಲಿ 81 ರನ್ ಗಳಿಸಿದ್ದರು. ಆದರೆ ಮಾಜಿ ನಾಯಕ ಫಿನಾಲೆಯಲ್ಲಿ ಪ್ರಭಾವ ಬೀರಲು ವಿಫಲರಾದರು. ಫೈನಲ್​ನಲ್ಲಿ ಅವರು 14 ಎಸೆತಗಳಲ್ಲಿ ಕೇವಲ 11 ರನ್​ಗೆ ಔಟಾದರು. ಕುಲ್ದೀಪ್ ಯಾದವ್ ತಮ್ಮದೇ ಬೌಲಿಂಗ್​ನಲ್ಲಿ ಕ್ಯಾಚ್ ಪಡೆದು ಕಿವೀಸ್​ ಬ್ಯಾಟರ್​ನನ್ನು ಡಗೌಟ್​ಗೆ ಕಳುಹಿಸಿದರು.

ಇದನ್ನೂ ಓದಿ: ಐಸಿಸಿ ಈವೆಂಟ್​ಗಳಲ್ಲಿ ಸತತ ಅತಿ ಹೆಚ್ಚು ಗೆಲುವು; ಎಂಎ...