ಭಾರತ, ಫೆಬ್ರವರಿ 2 -- ಮಂಗಳೂರು: ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಗಂಗರಾಜು ಅವರಿಗೆ ಬಲ ತುಂಬುವ ಉದ್ದೇಶದಿಂದ ವಾಮಾಚಾರ ಮಾಡಲಾಗಿದೆ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ. ಈ ವಾಮಾಚಾರಕ್ಕೆ ಸಂಬಂಧಿಸಿದ ವಿಡಿಯೋ ಇತ್ತೀಚೆಗೆ ಬಂಧನವಾಗಿರುವ ರಾಮಸೇನೆಯ ಮುಖಂಡ ಪ್ರಸಾದ್ ಅತ್ತಾವರನ ಮೊಬೈಲ್‌ನಲ್ಲಿತ್ತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.

ಮಸಾಜ್ ಪಾರ್ಲರ್ ಒಂದಕ್ಕೆ ದಾಳಿ ಮಾಡಿ ದಾಂಧಲೆ ಮಾಡಿರುವ ಹಿನ್ನೆಲೆಯಲ್ಲಿ ವಾರದ ಹಿಂದೆ ಪ್ರಸಾದ್ ಅತ್ತಾವರ ಬಂಧನವಾಗಿತ್ತು. ಈ ವೇಳೆ ಆತನ ಮೊಬೈಲ್ ಪರಿಶೀಲನೆ ಮಾಡಿದ್ದೇವೆ. ಆಗ ಮೊಬೈಲ್‌ನಲ್ಲಿ ದೇವಸ್ಥಾನವೊಂದರಲ್ಲಿ ಬಲಿ‌ಕೊಡುವ ದೃಶ್ಯವೊಂದರ ವಿಡಿಯೋ ಪತ್ತೆಯಾಗಿದೆ. ವಿಡಿಯೋದಲ್ಲಿ‌ ಐದು ಕುರಿಗಳನ್ನು ಬಲಿ ಕೊಡಲಾಗಿತ್ತು. ಬಲಿಕೊಟ್ಟ ಬಳಿಕ ರಕ್ತವನ್ನು ಸ್ನೇಹಮಯಿ ಮತ್ತು ಗಂಗರಾಜು ಫೋಟೊಗೆ ಅರ್ಪಣೆ ಮಾಡುವ ದೃಶ್ಯವಿತ್ತು.

ಈ ಪ್ರಾಣಿಬಲಿ ಎಲ್ಲಿ ಆಗಿರುವುದು ಎಂಬ ಬಗ್ಗೆ ಸ್ಪಷ್ಟವಿಲ್ಲ. ವಾಟ್ಸ್‌ಆ್ಯಪ್‌‌ನಲ್ಲಿ ಪ್ರಾಣಿಬಲಿ ವಿಡಿಯೋವಿತ್ತು. ಪ್...