ಭಾರತ, ಮೇ 30 -- ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮೇ 30 ರ ಶುಕ್ರವಾರದಿಂದ ಜೂನ್ 5ರ ಗುರುವಾರದವರೆಗೆ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ನಿಮ್ಮಿಂದ ಕುಟುಂಬಕ್ಕೆ ವಿಶೇಷವಾದ ಕೀರ್ತಿ, ಪ್ರತಿಷ್ಠೆ ಲಭಿಸುತ್ತದೆ. ಸಮಾಜದಲ್ಲಿ ಉನ್ನತ ಗೌರವ ನಿಮ್ಮದಾಗುತ್ತದೆ. ಕುಟುಂಬದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಬಾಳುತ್ತೀರಿ. ಆತ್ಮೀಯರ ಮನೆಗೆ ಭೇಟಿ ನೀಡಲಿದ್ದೀರಿ. ಸಭೆ ಸಮಾರಂಭಗಳ ಕೇಂದ್ರ ಬಿಂದುಗಳಾಗುತ್ತೀರಿ. ತವರು ಮನೆಯ ಪ್ರಭಾವದಿಂದ ವಿಶೇಷ ಕೆಲಸ ಕಾರ್ಯಗಳನ್ನು ನಿರ್ವಹಿಸಬಲ್ಲಿರಿ. ತಂದ...