Bengaluru, ಜೂನ್ 12 -- ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಜೂನ್ 13 ರ ಶುಕ್ರವಾರದಿಂದ 19ರ ಗುರುವಾರದವರೆಗೆ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ಸಮಯಕ್ಕೆ ತಕ್ಕಂತೆ ಹೊಂದಿಕೊಂಡು ನಿಮ್ಮ ಕೆಲಸ ಸಾಧಿಸುವಿರಿ. ಅನಿರೀಕ್ಷಿತವಾದ ಬದಲಾವಣೆಗಳು ಜೀವನದಲ್ಲಿ ಎದುರಾಗುತ್ತದೆ. ಹೊಸ ರೀತಿಯ ಜೀವನಕ್ಕೆ ಹೊಂದಿಕೊಂಡು ಬಾಳುವಿರಿ. ಕುಟುಂಬದ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಪೂರ್ಣಗೊಳಿಸುವಿರಿ. ತವರುಮನೆಯವರ ಸಹಾಯ ನಿಮಗೆ ದೊರೆಯುತ್ತದೆ. ವಿರಸ ಮರೆತು ಪತಿಯೊಂದಿಗೆ ವಿಶ್ವಾಸದಿಂದ ಜೀವನ ನಡೆಸುವಿ...