Bengaluru, ಜೂನ್ 5 -- ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಜೂನ್ 6 ರ ಶುಕ್ರವಾರದಿಂದ 12ರ ಗುರುವಾರದವರೆಗೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ಕಷ್ಟ ನಷ್ಟಗಳನ್ನು ಭಯಪಡದೆ ದಿಟ್ಟತನದಿಂದ ಎದುರಿಸುವಿರಿ. ಕೆಲಸ ಕಾರ್ಯಗಳು ಸುಲಭವಾಗಿ ಯಶಸ್ಸನ್ನು ಕಾಣುತ್ತವೆ. ಕುಟುಂಬದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವನ್ನು ಯಾರೂ ಬದಲಾಯಿಸಲಾರರು. ನಿಮ್ಮ ಸಹಾಯದಿಂದ ಪತಿಯು ಆರ್ಥಿಕ ಸಮಸ್ಯೆಯಿಂದ ಹೊರಬರುವರು. ಸಮಾಜ ಸೇವೆ ಮಾಡುವ ನಿಮ್ಮ ಆಸೆ ಕೈಗೂಡುವ ಕಾಲ ಬಂದಿದೆ. ಹಣವನ್ನು ಸಂಪಾದಿಸುವ ಮತ್ತು ಉಳ...