ಭಾರತ, ಮಾರ್ಚ್ 13 -- Women Weekly Horoscope: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಕೆಲ ಮಹಿಳೆಯರು ಕೂಡ ತಮ್ಮ ಭವಿಷ್ಯವನ್ನು ನೋಡಿಕೊಳ್ಳುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಮಾರ್ಚ್ 14 ರ ಶುಕ್ರವಾರದಿಂದ 20ರ ಗುರುವಾರದವರೆಗೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ಸ್ತ್ರೀ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ಚರ್ಮದೋಷವಿದ್ದಲ್ಲಿ ಪರಿಹಾರಗೊಳ್ಳುತ್ತದೆ. ಕೈಕಾಲುಗಳಲ್ಲಿ ಊತ ಇರಲಿದೆ. ದೀರ್ಘಕಾಲದ ಪ್ರವಾಸಕ್ಕೆ ಕುಟುಂಬದವರ ಜೊತೆಯಲ್ಲಿ ತೆರಳುವಿರಿ. ಶಾಸ್ತ್ರ ಸಂಪ್ರದಾಯಗಳಲ್ಲಿ ನಂಬಿಕೆ ಇರುತ್ತದೆ. ಸಮಾಜದ ನಾಯಕತ್ವ ನಿಮಗೆ ಲಭಿಸುತ್ತದೆ. ಮಾತಿನಲ್ಲಿ ಮೋಡಿ ಮಾಡ ಬಲ್ಲಿರಿ. ಯೋಚಿಸದೆ ಮಾತನಾಡುವುದಿಲ್ಲ. ಕಷ್ಟ ನಷ್ಟದಲ್ಲಿ ಇ...