ಭಾರತ, ಏಪ್ರಿಲ್ 22 -- ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ತಮ್ಮ ನಾಲ್ಕು ದಿನಗಳ ಕಾಲ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಅವರ ಪತ್ನಿ ಉಷಾ ವ್ಯಾನ್ಸ್ ಮತ್ತು ಮಕ್ಕಳೂ ಭಾರತಕ್ಕೆ ಬಂದಿದ್ದಾರೆ. ಆದರೆ, ಪತ್ನಿ ಮತ್ತು ಮಕ್ಕಳು ಧರಿಸಿದ ಉಡುಪು ಎಲ್ಲರ ಗಮನ ಸೆಳೆದಿದೆ.

ಭಾರತೀಯ-ಅಮೆರಿಕನ್ ಸೆಕೆಂಡ್ ಲೇಡಿ ತಮ್ಮ ಸೊಗಸಾದ ನೋಟದಿಂದ ಗಮನಾರ್ಹ ಪ್ರಭಾವ ಬೀರಿದ್ದಾರೆ. ಅವರು ಸಮಚಿತ್ತ ಮತ್ತು ಆಕರ್ಷಕ ನಡವಳಿಕೆಯನ್ನು ಸುಂದರವಾಗಿ ಪೂರೈಸುವ ಪ್ರಕಾಶಮಾನವಾದ ಕೆಂಪು ಉಡುಪಿನಲ್ಲಿ ಹೆಜ್ಜೆ ಹಾಕಿದ್ದಾರೆ.

ಉಷಾ ವ್ಯಾನ್ಸ್ ಪವರ್ ಸೂಟ್‌ಗಳು ಮತ್ತು ಸಾಮಾನ್ಯ ಪ್ಯಾಸ್ಟಲ್ ಬಿಟ್ಟು ಸಖತ್ ಬೋಲ್ಡ್ ಆಗಿರುವ ಕೆಂಪು ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಇದು ಎಲ್ಲರನ್ನೂ ಆಕರ್ಷಿಸಿತು. ಇವರ ಜೊತೆಗೆ ಅವರ ಮಕ್ಕಳ ಉಡುಪೂ ಗಮನ ಸೆಳೆಯಿತು.

ಹೈ ನೆಕ್‌ಲೈನ್‌, ಪೆನ್ಸಿಲ್ ಸಿಲೂಯೆಟ್‌, ಮ್ಯಾಕ್ಸಿ ಲೆಂಥ್ ಹೆಮ್‌ಲೈನ್ ಸ್ಪೀವ್ ಲೆಸ್ ಉಡುಪು ಅವರಿಗೊಂದು ಪರಿ‍ಪೂರ್ಣ ಲುಕ್ ನೀಡಿದೆ. ಈಗಿನ ಲೆಟೆಸ್ಟ್​ ಟ್ರೆಂಡ್​ಗೆ ತಕ್ಕಂತೆ ಸಮಕಾಲೀನ ಶೈಲಿಯನ್ನ...