ಭಾರತ, ಮೇ 13 -- ಪಿಯುಸಿ ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟ. ಈ ಹಂತದಲ್ಲಿ ನೀವು ಆಯ್ಕೆ ಮಾಡುವ ಪಠ್ಯಕ್ರಮವು ನಿಮ್ಮ ಮುಂದಿನ ಓದು ಮಾತ್ರವಲ್ಲ, ವೃತ್ತಿಪರ ದೃಷ್ಟಿಯಿಂದಲೂ ಬಹಳ ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ರಾಜ್ಯ ಮಂಡಳಿ (ಸ್ಟೇಟ್‌), ಸಿಬಿಎಸ್‌ಇ ಮತ್ತು ಐಸಿಎಸ್‌ಇ ಈ ಮೂರು ಪಠ್ಯಕ್ರಮದಲ್ಲಿ ಯಾವುದನ್ನು ಆಯ್ಕೆ ಮಾಡುವುದು ಎಂಬ ಗೊಂದಲವಿರುತ್ತದೆ. ಈ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಪ್ರತಿಯೊಂದು ಪಠ್ಯಕ್ರಮದಲ್ಲೂ ಸಾಮರ್ಥ್ಯ ಹಾಗೂ ದೌರ್ಬಲ್ಯ ಎರಡೂ ಇರುತ್ತದೆ ಎನ್ನುವುದು ಮಾತ್ರ ಸುಳ್ಳಲ್ಲ. ಪಠ್ಯಕ್ರಮದ ಆಳ, ಕಷ್ಟದ ಮಟ್ಟ, ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ಮತ್ತು ವೃತ್ತಿ ಮಾರ್ಗಗಳಂತಹ ಅಂಶಗಳ ಆಧಾರದ ಮೇಲೆ ಅವುಗಳನ್ನು ಹೋಲಿಸುವುದು ಮುಖ್ಯವಾಗುತ್ತದೆ.

ಪಠ್ಯಕ್ರಮ ರಚನೆ: ರಾಜ್ಯ ಮಂಡಳಿಯು ಪಠ್ಯಕ್ರಮ ಅಥವಾ ಸಿಲೇಬಸ್‌ ತಯಾರು ಮಾಡುತ್ತದೆ. ಆದ್ದರಿಂದ ಇದು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ ರೀತಿಯಲ...