ಭಾರತ, ಏಪ್ರಿಲ್ 15 -- ಆಸೆ, ನಿನ್ನ ಜೊತೆ ನನ್ನ ಕಥೆ, ಶಾರದೆ, ನೀನಾದೆ ನಾ, ಗೌರಿಶಂಕರ, ಅವನು ಮತ್ತೆ ಶ್ರಾವಣಿ ಮುಂತಾದ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ಮತ್ತೊಂದು ಹೊಸ ಧಾರಾವಾಹಿಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಸ್ನೇಹದ ಕಡಲಲ್ಲಿ' ಎಂಬ ಹೊಸ ಧಾರಾವಾಹಿ ಸದ್ಯದಲ್ಲೇ ಪ್ರಸಾರ ಆರಂಭಿಸಲಿದೆ. ಪ್ರೋಮೊ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಈ ಧಾರಾವಾಹಿ ಇದೀಗ ಮತ್ತೊಂದು ಆಕರ್ಷಣೆಗೆ ಕಾರಣವಾಗಿದೆ.

ಸ್ನೇಹದ ಕಡಲಲ್ಲಿ ಧಾರಾವಾಹಿ ಮೂಲಕ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆ ಬರ್ತಿದ್ದಾರಂತೆ ದಕ್ಷಿಣ ಭಾರತದ ಖ್ಯಾತ ನಟ. ಆದರೆ ಅವರು ಯಾರು ಎಂಬುದನ್ನು ರಿವೀಲ್ ಮಾಡಿಲ್ಲ ವಾಹಿನಿ. ಬದಲಾಗಿ ಯಾರು ಎಂಬುದನ್ನು ಗೆಸ್ ಮಾಡಲು ಪ್ರೇಕ್ಷಕರಿಗೆ ಪ್ರೋಮೊ ಬಿಡುಗಡೆ ಮಾಡುವ ಮೂಲಕ ಚಾಲೆಂಜ್ ನೀಡಿದೆ. ಅಲ್ಲದೇ ಈ ಧಾರಾವಾಹಿಯಲ್ಲಿ ನಟಿಸಿರುವ ಇತರ ಕಲಾವಿದರು ಈ ಖ್ಯಾತ ನಟನ ಬಗ್ಗೆ ಮಾತನಾಡಿರುವ ವಿಡಿಯೊವನ್ನ...