ಭಾರತ, ಏಪ್ರಿಲ್ 28 -- ಬಾಲಿವುಡ್ ಕಂಡ ಬೆಸ್ಟ್ ನಾಯಕಿಯರಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಒಬ್ಬರು. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಉತ್ತಮ ಚಲನಚಿತ್ರಗಳನ್ನು ಮಾಡಿದ್ದಾರೆ. ಆದರೆ ಅವರ ಕೆಲವು ಸೂಪರ್‌ಹಿಟ್‌ ಸಿನಿಮಾಗಳಿಗೆ ಮೊದಲ ಆಯ್ಕೆ ಆಕೆ ಆಗಿರುವುದಿಲ್ಲ. ಬೇರೆಯವರು ರಿಜೆಕ್ಟ್ ಮಾಡಿದ ಚಿತ್ರಗಳಿಗೆ ಈಕೆ ಆಯ್ಕೆಯಾಗಿ ಸೂಪರ್ ಹಿಟ್ ಚಿತ್ರ ಎನ್ನಿಸುತ್ತದೆ. ಅಂತಹ ಕೆಲವು ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಫ್ಯಾಷನ್: 2008ರ ಫ್ಯಾಷನ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಪಾತ್ರವನ್ನು ಮೊದಲು ಕರೀನಾ ಕಪೂರ್ ಅವರಿಗೆ ನೀಡಲಾಯಿತು. ಅವರು ಆ ಚಿತ್ರವನ್ನು ತಿರಸ್ಕರಿಸಿದಾಗ, ಪ್ರಿಯಾಂಕಾ ಅವರಿಗೆ ಈ ಅವಕಾಶ ಸಿಕ್ಕಿತು. ಈ ಚಿತ್ರಕ್ಕಾಗಿ ಪ್ರಿಯಾಂಕಾ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆಯುತ್ತಾರೆ.

ಬಾಜಿರಾವ್ ಮಸ್ತಾನಿ: 2015ರಲ್ಲಿ ಬಿಡುಗಡೆಯಾದ ಬಾಜಿರಾವ್ ಮಸ್ತಾನಿ ಚಿತ್ರಕ್ಕೆ ಪ್ರಿಯಾಂಕಾ ಪಾತ್ರವನ್ನು ಮೊದಲು ಐಶ್ವರ್ಯಾ ರೈ ಬಚ್ಚನ್ ಅವರಿಗೆ ನೀಡಲಾಯಿತು. ಆದರೆ ಆಕೆ ತಿರಸ್ಕರಿಸಿದ್ದ ಕಾರಣ ಪ್ರಿಯಾಂಕಾಗೆ ನೀಡಲಾಗಿತ...