ಭಾರತ, ಏಪ್ರಿಲ್ 20 -- ಕರ್ನಾಟಕದ ಜನಪ್ರಿಯ ನಟಿ ಹಾಗೂ ಕ್ರಿಕೆಟಿಗ ದಾಂಪತ್ಯ ಜೀವನಕ್ಕೆ ಕಾಲಿಡುವ ಖುಷಿಯಲ್ಲಿದ್ದಾರೆ. ಸಿನಿಮಾ ಹಾಗೂ ಕ್ರಿಕೆಟ್‌ ಕ್ಷೇತ್ರದಲ್ಲಿ ಜನಪ್ರಿಯರಾಗಿರುವ ಸೆಲೆಬ್ರಿಟಿಗಳ ವಿವಾಹ ಹೊಸದೇನಲ್ಲ. ಈ ಪಟ್ಟಿಗೆ ಈಗ ಹೊಸ ಸೇರ್ಪಡೆಯೇ, ನಟಿ ಅರ್ಚನಾ ಕೊಟ್ಟಿಗೆ ಹಾಗೂ ಕ್ರಿಕೆಟಿಗ ಶರತ್ ಬಿ.ಆರ್. ಇವರಿರೂ ಇದೇ ಏಪ್ರಿಲ್ 23ರಂದು ಹಸೆಮಣೆ ಏರಲಿದ್ದಾರೆ. ಇವರಿಬ್ಬರೂ 8 ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ವರದಿಯಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿರುವ ನಟಿ ಅರ್ಚನಾ ಕೊಟ್ಟಿಗೆ, ಈಗಾಗಲೇ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅತ್ತ ಸ್ಟಾರ್‌ ಕ್ರಿಕೆಟರ್ ಶರತ್‌, ಕರ್ನಾಟಕ ತಂಡದ ಪರ ಮಾತ್ರವಲ್ಲದೆ ಐಪಿಎಲ್‌ನಲ್ಲೂ ಗುರುತಿಸಿಕೊಂಡಿದ್ದಾರೆ. ಇವರಿಬ್ಬರು ಒಂದೇ ಕಾಲೇಜಿನಲ್ಲಿ ಓದಿದ್ದು. ನಟಿ ಅರ್ಚನಾ ಅವರಿಗೆ ಶರತ್ ಒಂದು ವರ್ಷ ಸೀನಿಯರ್‌. ಇಬ್ಬರೂ ಪರಸ್ಪರ ಪರಿಚಿತರಾದ ನಂತರ ಇಷ್ಟಪಟ್ಟು ಮದುವೆಯಾಗಲು ನಿರ್ಧರಿಸಿದ್ದಾರೆ. ಈಗಾಗಲೇ ಜೋಡಿ ನಿಶ್ಚಿತಾರ್ಥ ಮಾಡಿಕೊಂಡ...