ಭಾರತ, ಮಾರ್ಚ್ 10 -- ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್​​ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್​ಗಳ ಜಯದೊಂದಿಗೆ ಟೀಮ್ ಇಂಡಿಯಾ ಮತ್ತೊಂದು ಜಾಗತಿಕ ಟ್ರೋಫಿಯನ್ನು ಗೆದ್ದ ಬಳಿಕ ದುಬೈನ ಮೈದಾನದಲ್ಲಿ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಅದರಲ್ಲೂ ನಾಯಕ ರೋಹಿತ್​ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಸ್ಟಂಪ್​ಗಳೊಂದಿಗೆ ದಾಂಡಿಯಾ ಆಡಿದ್ದು ನಿಜಕ್ಕೂ ಎಲ್ಲರ ಕಣ್ಮನ ಸೆಳೆಯಿತು. ಟ್ರೋಫಿ ಗೆದ್ದ ಖುಷಿಯ ಅಲೆಯಲ್ಲಿ ತೇಲುತ್ತಿದ್ದ ರೋ-ಕೋ ಆಡಿದ ದಾಂಡಿಯಾ ಸೆಲೆಬ್ರೇಷನ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.

ಭಾರತ ಗೆದ್ದ ಬೆನ್ನಲ್ಲೇ ಮೈದಾನಕ್ಕೆ ಆಗಮಿಸಿದ ಈ ಜೋಡಿ ಸ್ಟಂಪ್ಸ್ ಹಿಡಿದು ಮಕ್ಕಳಂತೆ ಸಂಭ್ರಮಿಸಿದರು. ಸ್ಟಂಪ್‌ಗಳನ್ನು ದಾಂಡಿಯಾ ಆಗಿ ಪರಿವರ್ತಿಸಿ ಭಾರತದ ಗೆಲುವನ್ನು ತಮಾಷೆಯಾಗಿ ಆಚರಿಸಿದರು. ಅದೇ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅವರ ನಡೆಗೆ ಸಿಕ್ಕಾಪಟ್ಟೆ ಪ್ರಶಂಸೆ ವ್ಯಕ್ತವಾಗಿದೆ. ರೋಹಿತ್​ ಮತ್ತು ಕೊಹ್ಲಿಗೆ ಇದು ನಾಲ್ಕನೇ ಐಸಿಸಿ ಟ್ರೋಫಿಯಾಗಿದ...