ಭಾರತ, ಮಾರ್ಚ್ 25 -- ಐಪಿಎಲ್ ಪಂದ್ಯಾವಳಿಯು ದಿನದಿಂದ ದಿನಕ್ಕೆ ರೋಚಕವಾಗಿ ಸಾಗುತ್ತಿದೆ. ಸೋಮವಾರ (ಮಾ.24) ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 1 ವಿಕೆಟ್ ಅಂತರದ ರೋಮಾಂಚಕ ಜಯ ಸಾಧಿಸಿತು. ಒಂದು ಹಂತದಲ್ಲಿ ಡೆಲ್ಲಿಗೆ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ವಿಪ್ರಾಜ್‌ ನಿಗಮ್‌ ಹಾಗೂ ಅಶುತೋಷ್‌ ಶರ್ಮಾ ಆಟವು ಪಂದ್ಯದ ಫಲಿತಾಂಶವನ್ನೇ ಬದಲಿಸಿತು. ಕಳೆದ ಆವೃತ್ತಿಯಲ್ಲಿ ಡೆಲ್ಲಿ ನಾಯಕನಾಗಿದ್ದ ರಿಷಭ್ ಪಂತ್‌ ಈ ಬಾರಿ ಎದುರಾಳಿ ತಂಡದ ನಾಯಕತ್ವ ವಹಿಸಿದ್ದರು. ಹೀಗಾಗಿ ಡೆಲ್ಲಿ ವಿರುದ್ಧ ಗೆಲ್ಲುವುದು ಅವರಿಗೆ ಪ್ರತಿಷ್ಠೆಯಾಗಿತ್ತು. ನಾಯಕನಾಗಿ, ಬ್ಯಾಟರ್‌ ಆಗಿ ಹಾಗೂ ಒಬ್ಬ ವಿಕೆಟ್‌ ಕೀಪರ್‌ ಆಗಿ ಪಂತ್‌ ಮಾಡಿದ ಕೆಲವು ತಪ್ಪುಗಳ ಎಲ್‌ಎಸ್‌ಜಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಪಂದ್ಯದಲ್ಲಿ ಲಕ್ನೋ ನೀಡಿದ 210 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು 19.3 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 211 ರನ್‌ ಗಳಿಸಿ ಗೆದ್ದು ಬೀಗಿತು. ಇಂಪ್ಯಾಕ್ಟ್ ಆಟಗಾ...