ಭಾರತ, ಮಾರ್ಚ್ 24 -- ದೀಪಿಕಾ ಪಡುಕೋಣೆ ಇತ್ತೀಚೆಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಗಮನ ಸೆಳೆದಿದ್ದಾರೆ. ನಟಿ ಲೂಯಿ ವಿಟಾನ್ ಪ್ರದರ್ಶನದಲ್ಲಿ ಕಪ್ಪು ಲೆಗ್ಗಿಂನ್ಸ್‌ ತೊಟ್ಟು ಒಂದು ದೊಡ್ಡ ಜಾಕೆಟ್ ಹಾಕಿ ಮಿಂಚಿದ್ದಾರೆ. ಕಾರ್ಯಕ್ರಮಕ್ಕೆ ಬರುವ ಮೊದಲು, ಅವರು ತಮ್ಮ ತಂಡದೊಂದಿಗೆ ಪ್ಯಾರಿಸ್‌ನಲ್ಲಿ ಸುತ್ತಾಟ ನಡೆಸಿದ್ದಾರೆ. ತಮ್ಮ ಸಮಯವನ್ನು ಹೆಚ್ಚು ಸದುಪಯೋಗಪಡಿಸಿಕೊಂಡಿದ್ದಾರೆ. ಯಾರಾದರೂ ಹೊರಗಡೆ ಹೋದಾಗ ಯಾವ ರೀತಿ ಅಲ್ಲಿನ ಪ್ರದೇಶಗಳನ್ನು ನೋಡಿ ಖುಷಿ ಪಡುತ್ತಾರೋ ಅದೇ ರೀತಿ ದೀಪಿಕಾ ಕೂಡ ಈ ಸಮಯವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ಯಾರಿಸ್‌ ಹೋದಾಗ ತಾವೇನು ಮಾಡಿದ್ದಾರೆ ಎಂಬ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಅವರು ಅಲ್ಲಿ ಫ್ರೆಂಚ್ ಭಾಷೆ ಮಾತನಾಡುತ್ತಾ, ಸಿಟಿ ರೌಂಡ್‌ ಹಾಕಿದ್ದಾರಂತೆ. ಇತ್ತೀಚೆಗಷ್ಟೇ ಅವರು ಸಾಮಾಜಿಕ ಜಾಲತಾಣದಲ್ಲಿ ಅವರ ಸುತ್ತಾಟದ ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ತಾನು ಪ್ಯಾರಿಸ್‌ನಲ್ಲಿ ಏನೆಲ್ಲ ಮಾಡಿದೆ ಎಂದ...