Bengaluru, ಮೇ 7 -- ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಉಗ್ರರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಉಗ್ರರಿಗೆ ಸೇರಿದ 9 ಅಡಗುತಾಣಗಳ ಮೇಲೆ ತಡರಾತ್ರಿ ದಾಳಿ ಮಾಡಿ ನಾಶಪಡಿಸಲಾಗಿದೆ. ಜೆಇಎಂ ಕ್ಯಾಂಪ್ ಮರ್ಕಝ್ ಸುಭಾನ್ ಅಲ್ಲಾಹ್, ಮುರಿಡ್ಕೆಯಲ್ಲಿರುವ ಎಲ್ಇಟಿ ಕ್ಯಾಂಪ್, ಗುಲ್ ಪುರ್, ಸವಾಯಿಯಲ್ಲಿರುವ ಎಲ್ಇಟಿ ಕ್ಯಾಂಪ್, ಜೆಇಎಂನ ಬಿಲಾಲ್ ಕ್ಯಾಂಪ್, ಕೊಟ್ಲಿಯ ಎಲ್ಇಟಿ ಕ್ಯಾಂಪ್, ಬರ್ನಾಲಾ ಕ್ಯಾಂಪ್, ಸರ್ಜಲ್ ನಲ್ಲಿರುವ ಜೆಇಎಂ ಕ್ಯಾಂಪ್, ಹೆಮ್ ಮೂನಾದಲ್ಲಿರವ ಹಿಜ್ ಬಲ್ ಮುಜಾಹಿದೀನ್ ಕ್ಯಾಂಪ್ ಗಳನ್ನು ಭಾರತೀಯ ವಾಯು ಸೇನೆ ನಾಶ ಪಡಿಸಿರುವುದಾಗಿ ವರದಿಯಾಗಿದೆ.
ಭಾರತೀಯ ವಾಯು ಪಡೆ ಹಾಗೂ ನೌಕಾದಳದ ಜಂಟಿ ಕಾರ್ಯಾಚರಣೆಯಲ್ಲಿ ರಫೇಲ್ ಜೆಟ್ ಗಳನ್ನು ಬಳಿಸಿ ದಾಳಿ ಮಾಡಲಾಗಿದೆ. ಸ್ಕಾಪ್ ಕ್ಷಿಪಣಿ, ಹ್ಯಾಮರ್ ಬಾಂಬ್ ಗಳನ್ನು ಹೊಂದಿದ್ದ ರಫೇಲ್ ಜೆಟ್ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.