Bengaluru, ಮಾರ್ಚ್ 8 -- Kantara Movie: ಸೋಷಿಯಲ್‌ ಮೀಡಿಯಾದಲ್ಲೀಗ ಧರ್ಮಸ್ಥಳ ಸೌಜನ್ಯ ಪ್ರಕರಣದ್ದೇ ಚರ್ಚೆ. ದೂತ ಸಮೀರ್‌ ಎಂಡಿ ಎಂಬುವರರು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಘಟನೆಯ ಬಗ್ಗೆ ವಿಸ್ತೃತ ವಿಡಿಯೋ ಅಪ್‌ಲೋಡ್‌ ಮಾಡಿದ್ದೇ ತಡ, ಕರ್ನಾಟಕದ ಬಹುತೇಕರು ವಿಡಿಯೋ ನೋಡಿದ್ದಾರೆ. ಪರ-ವಿರೋಧದ ಚರ್ಚೆಗಳಿಗೂ ವಿಡಿಯೋ ನಾಂದಿ ಹಾಡಿದೆ. ದಶಕದ ಹಿಂದಿನ ಈ ಪ್ರಕರಣಕ್ಕೆ ಈವರೆಗೂ ಪೂರ್ಣ ವಿರಾಮ ಬಿದ್ದಿಲ್ಲ. ತಾರ್ಕಿಕ ಅಂತ್ಯವೂ ಸಿಕ್ಕಿಲ್ಲ. ಸೌಜನ್ಯ ಪರ ಧ್ವನಿ ಎತ್ತುವವರು ಇಂದಿಗೂ ಹೋರಾಟ, ಪ್ರತಿಭಟನೆ, ಅಭಿಯಾನಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೆಲ್ಲದರ ನಡುವೆ ಅಚ್ಚರಿ ಎಂಬಂತೆ, ಕಾಂತಾರ ಸಿನಿಮಾದ ಒಂದಷ್ಟು ದೃಶ್ಯಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗುತ್ತಿವೆ. ಸಮೀರ್ ಅವರ ವಿಡಿಯೋದ ತುಣುಕುಗಳೊಂದಿಗೆ ಕಾಂತಾರಾ ಚಿತ್ರದ ದೃಶ್ಯಗಳನ್ನು ಹೋಲಿಸುತ್ತಿದ್ದಾರೆ.

ದೂತ ಸಮೀರ್‌ ಎಂಡಿ (Dhootha : Sameer MD) ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಎಂಟು ದಿನಗಳ ಹಿಂದೆ "ಧರ್ಮಸ್ಥಳ Horror; ಊರಿಗೆ ದೊಡ್ಡವರೆ ಕ...