ಭಾರತ, ಏಪ್ರಿಲ್ 15 -- ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಜನಾಕ್ರೋಶಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ ಆರೋಪಿಯನ್ನು ಪಿಎಸ್‌ಐ ಅನ್ನಪೂರ್ಣ ಅವರು ಎನ್‌ಕೌಂಟರ್‌ ಮಾಡಿರುವ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ಪರವಿರೋಧ ಚರ್ಚೆ ನಡೆಯುತ್ತಿದೆ. ಈ ರೀತಿ ಎನ್‌ಕೌಂಟರ್‌ ಮಾಡುವುದು ಸರಿಯೇ? ಇಂತಹ ಘಟನೆಗಳಲ್ಲಿ ಎಲ್ಲಾದರೂ ಎನ್‌ಕೌಂಟರ್‌ಗೆ ಒಳಗಾದವರು ನಿರಾಪರಾಧಿಗಳಾಗಿದ್ದರೆ ಏನಾಗಬಹುದು? ಎಂದೆಲ್ಲ ಜನರು ಚರ್ಚಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಇದೇ ರೀತಿಯ ಅಭಿಪ್ರಾಯವನ್ನು ಅಂಬಿಕಾ ವಿ. ಪ್ರಭು ವ್ಯಕ್ತಪಡಿಸಿದ್ದಾರೆ.

ಅಂಬಿಕಾ ವಿ ಪ್ರಭು ಬರಹ: ಎನ್‌ಕೌಂಟರ್‌ ಡ್ರಾಮಾವನ್ನು ಸಮರ್ಥಿಸುವವರಿಗೆ. ನಮ್ಮ ದೇಶ ಪೊಲೀಸ್ ಸ್ಟೇಟ್ ಅಲ್ಲ ವೆಲ್‌ಫೇರ್‌ ಸ್ಟೇಟ್‌ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. "ಸೌಜನ್ಯ ಕೇಸ್‌ನಲ್ಲಿ ಸಂತೋಷ ರಾವ್‌ನನ್ನು ಎನ್‌ಕೌಂಟರ್‌ ಮಾಡಿದ್ದರೆ ಏನಾಗುತ್ತಿತ್ತು?" ಅವಳ ನಿಜವಾದ ಆರೋಪಿಗಳು ಯಾರು ಅಂತ ಜನರಿಗೆ ತಿಳಿಯುತ್ತಾ ಇತ್ತ. ಕೂಲಿ...