ಭಾರತ, ಏಪ್ರಿಲ್ 18 -- ಒಂದು ಕಾಲದಲ್ಲಿ ಟಾಲಿವುಡ್‌ನ ಟಾಪ್ ನಟಿಯಾಗಿದ್ದ ಪೂಜಾ ಹೆಗ್ಡೆಗೆ ನಂತರ ನಿಧಾನಕ್ಕೆ ಅವಕಾಶಗಳು ಸಿಗುವುದು ಕಡಿಮೆಯಾಗುತ್ತದೆ. ಇದರಿಂದ ಹಲವು ಬಾಲಿವುಡ್ ಹಾಗೂ ಕಾಲಿವುಡ್‌ನತ್ತ ಮುಖ ಮಾಡುತ್ತಾರೆ. ಸಿನಿಮಾಗಳಲ್ಲಿ ಅವಕಾಶ ಸಿಗುವುದು ಕಡಿಮೆಯಾದ್ರೂ ಈಕೆಗೆ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್‌ಗಳ ಸಂಖ್ಯೆ ಕಡಿಮೆಯಾಗಿಲ್ಲ. ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡಿರುವ ಕರಾವಳಿ ಬೆಡಗಿ 'ಸೋಷಿಯಲ್ ಮಿಡಿಯಾದಲ್ಲಿ ಇಷ್ಟೊಂದು ಫಾಲೋವರ್ಸ್ ಇದ್ರೂ ಏನು ಪ್ರಯೋಜನ' ಎಂದು ಬೇಸರ ಹೊರ ಹಾಕಿದ್ದಾರೆ.

ಸದ್ಯ ಪೂಜಾ ಹೆಗ್ಡೆ ತಮ್ಮ ಮುಂದಿನ ರೆಟ್ರೊ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಇವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಆಗ ಸಾಮಾಜಿಕ ಜಾಲತಾಣದ ಕುರಿತು ಅವರು ಹೇಳಿರುವ ಮಾತು ಈ ವೈರಲ್ ಆಗುತ್ತಿದೆ. ನಿಜವಾದ ಜಗತ್ತು ಹಾಗೂ ಸಾಮಾಜಿಕ ಜಾಲತಾಣ ಈ ಎರಡೂ ಭಿನ್ನವಾಗಿದೆ ಎಂದು ಪೂಜಾ ಹೇಳಿದ್ದಾರೆ.

'ನನಗೆ ಇನ್‌ಸ್ಟಾಗ್ರಾಂನಲ್ಲಿ 3 ಕೋಟಿ ಫಾಲೋವರ್ಸ್‌ ಇದ್ದಾರೆ. ಹಾಗಂತ...