ಭಾರತ, ಏಪ್ರಿಲ್ 15 -- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್​ಗಳ ಸೋಲಿನಿಂದ ಕಂಗೆಟ್ಟಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Gaints) ತಂಡಕ್ಕೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಗಾಯದ ಕಾರಣ ಮೊದಲಾರ್ಧ ಐಪಿಎಲ್​ಗೆ (IPL) ದೂರವಾಗಿದ್ದ ​ವೇಗಿ ಮಯಾಂಕ್ ಯಾದವ್ (Mayank Yada) ಅವರು ಬೆನ್ನು ನೋವಿನಿಂದ ಸಂಪೂರ್ಣ ಚೇತರಿಕೊಂಡು ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಏಪ್ರಿಲ್ 19ರಂದು ನಡೆಯುವ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬೆಂಗಳೂರಿನ ಸೆಂಟರ್ ಫಾರ್ ಎಕ್ಸಲೆನ್ಸ್ ವೈದ್ಯಕೀಯ ತಂಡವು ಭಾನುವಾರ ನಡೆಸಿದ ಫಿಟ್​ನೆಸ್ ಪರೀಕ್ಷೆಯಲ್ಲಿ ಅವರು ಪಾಸ್ ಆಗಿದ್ದು, ಐಪಿಎಲ್‌ನಲ್ಲಿ ಆಡಲು ಕ್ಲಿಯರೆನ್ಸ್ ಪ್ರಮಾಣಪತ್ರ ನೀಡಿದೆ.

ಬಾಂಗ್ಲಾದೇಶ ವಿರುದ್ಧ ಭಾರತ ಪರ ಆಡಿದ ಎರಡು ಟಿ20 ಪಂದ್ಯಗಳ ನಂತರ ಬೆನ್ನುನೋವಿನಿಂದಾಗಿ ಮಯಾಂಕ್ ಅಕ್ಟೋಬರ್ 2024ರಿಂದ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ಹೊರಗುಳಿದಿದ್ದರು. ಅಂದಿನಿಂದ ಚೇತರಿಸಿಕೊಳ್ಳಲು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ (CoE) ಚಿಕಿ...