Bengaluru, ಮೇ 25 -- ಅನುಭವಿ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ (Kidambi Srikanth) ಅವರ ದೀರ್ಘ ಪ್ರಶಸ್ತಿ ಬರ ಮತ್ತೆ ಮುಂದುವರೆದಿದೆ. ಮಲೇಷ್ಯಾ ಮಾಸ್ಟರ್ಸ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ನನಸಾಗಲಿಲ್ಲ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಆಟಗಾರ, ರನ್ನರ್ ಅಪ್ ಸ್ಥಾನದೊಂದಿಗೆ ತಮ್ಮ ಅಭಿಯಾನವನ್ನು ಮುಗಿಸಿದರು. ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ವಿಶ್ವದ 4ನೇ ಶ್ರೇಯಾಂಕಿತ ಆಟಗಾರ ಲಿ ಶಿ ಫೆಂಗ್ ವಿರುದ್ಧ ಭಾರತೀಯ ತಾರೆ ನೇರ ಸೆಟ್‌ಗಳಿಂದ ಸೋತರು.
ಗಾಯಗಳಿಂದಾಗಿ ಹೆಚ್ಚು ಆಡಲು ಸಾಧ್ಯವಾಗದೆ ಹಾಗೂ ಅವಕಾಶಗಳನ್ನು ಕಳೆದುಕೊಂಡಿದ್ದ 32 ವರ್ಷದ ಆಟಗಾರ, ಕಳೆದ ಆರು ವರ್ಷಗಳಲ್ಲಿ ಇದೇ ಮೊದಲ ಬಿಡಬ್ಲ್ಯೂಎಫ್ ವಿಶ್ವ ಟೂರ್ ಫೈನಲ್ ತಲುಪಿದ್ದರು. ಅರ್ಹತಾ ಪಂದ್ಯಗಳಿಂದ ಆರಂಭಿಸಿ ಬಿಡಬ್ಲ್ಯೂಎಫ್ 500 ಪಂದ್ಯಾವಳಿಯ ಪ್ರಶಸ್ತಿ ಹೋರಾಟದವರೆಗೆ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಪ್ರಶಸ್ತಿ ಗೆಲುವಿನ ನಿರೀಕ್ಷೆ ಇತ್ತು. ಆದರೆ, ವಿಶ್ವದ ಮಾಜಿ ನಂ.1 ಆಟಗಾರ...
Click here to read full article from source
To read the full article or to get the complete feed from this publication, please
Contact Us.