ಭಾರತ, ಫೆಬ್ರವರಿ 8 -- ಸೋರೆಕಾಯಿ ಹೆಸರು ಕೇಳಿದರೆ ಸಾಕು ಅನೇಕರು ಮೂಗು ಮುರಿಯುತ್ತಾರೆ. ಆದರೆ, ಸೋರೆಕಾಯಿ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ನಿಮ್ಮ ಮನೆಮಂದಿಯೂ ಸೋರೆಕಾಯಿ ತಿನ್ನದಿದ್ದರೆ ಅವರಿಗಾಗಿ ರುಚಿಕರವಾದ ಈ ಪಾಕವಿಧಾನವನ್ನು ಮಾಡಬಹುದು. ಸೋರೆಕಾಯಿಯಿಂದ ನೀವು ಸಿಹಿಖಾದ್ಯ ಪಾಯಸ ತಯಾರಿಸಿ ತಿಂದಿರಬಹುದು. ಇಲ್ಲಿದೆ ರುಚಿಕರವಾದ ಸೋರೆಕಾಯಿ ಮೊಮೊಸ್ ತಯಾರಿಸುವ ವಿಧಾನ.

ಸಾಮಾನ್ಯವಾಗಿ ಮಕ್ಕಳು ಮತ್ತು ವಯಸ್ಕರು ಮೊಮೊಸ್ ಅನ್ನು ತುಂಬಾ ಇಷ್ಟಪಡುತ್ತಾರೆ. ಹೀಗಾಗಿ ಅವರಿಗಾಗಿ ಸೋರೆಕಾಯಿ ಮೊಮೊಸ್ ತಯಾರಿಸಿ. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಸೋರೆಕಾಯಿ- ಒಂದು, ಈರುಳ್ಳಿ- 1, ಬೆಳ್ಳುಳ್ಳಿ ಎಸಳುಗಳು- ಎಂಟರಿಂದ ಹತ್ತು, ಶುಂಠಿ- ಒಂದು ಇಂಚು, ಹಸಿಮೆಣಸಿನಕಾಯಿ- 2, ಸೋಯಾ ಸಾಸ್- ಒಂದು ಚಮಚ, ಚಿಲ್ಲಿ ಸಾಸ್- 1 ಚಮಚ, ವಿನೆಗರ್- ಒಂದು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಚಿಲ್ಲಿ ಫ್ಲೇಕ್ಸ್- ಅರ್ಧ ಚಮಚ, ಮೈದಾ- ಅರ್ಧ ಕಪ್, ಗೋಧಿ ಹಿಟ್ಟು- ಅರ್ಧ ಕಪ್.

ಇದನ್ನೂ...