ಭಾರತ, ಏಪ್ರಿಲ್ 4 -- ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್‌ (Shikhar Dhawan) ವಿಚ್ಛೇದನವಾಗಿದ್ದು ಹಳೆಯ ವಿಷಯ. ಇದೀಗ ಧವನ್‌ಗೆ ಹೊಸ ಗರ್ಲ್‌ಫ್ರೆಂಡ್‌ ಇರುವ ಬಗ್ಗೆ ಎಲ್ಲೆಡೆ ಸುದ್ದಿ ಹರಡಿದೆ. ಧವನ್‌ ಅವರ ವದಂತಿಯಲ್ಲಿರುವ ಗರ್ಲ್‌ಫ್ರಂಡ್‌ ಹೆಸರು ಸೋಫಿ ಶೈನ್. ಶಿಖರ್ ಧವನ್ ತಮ್ಮ ಮಾಜಿ ಪತ್ನಿ ಆಯೇಷಾ ಮುಖರ್ಜಿ ಅವರೊಂದಿಗಿನ 12 ವರ್ಷಗಳ ದಾಂಪತ್ಯದಿಂದ ಬೇರ್ಪಟ್ಟು ತುಂಬಾ ಸಮಯವಾಗಿದೆ. ಅಲ್ಲದೆ ತಮ್ಮ ಮಗನಿಂದಲೂ ಧವನ್‌ ದೂರ ಇದ್ದಾರೆ. ಇತ್ತೀಚೆಗೆ ಧವನ್ ಕೆಲವೊಂದು ವಿಡಿಯೊಗಳಲ್ಲಿ ತನ್ನ ಜೀವನದಲ್ಲಿ ಬೇರೊಬ್ಬರು ಎಂಟ್ರಿಯಾಗಿರುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಹೀಗಾಗಿ ಶಿಖರ್ ಧವನ್ ಅವರ ಹೆಸರಿನೊಂದಿಗೆ ಸೋಫಿ ಶೈನ್ ಜೊತೆ ಹೆಸರು ತಳುಕು ಹಾಕಿಕೊಂಡಿದೆ.

ಐಪಿಎಲ್‌ಗೂ ಮುಂಚೆ ನಡೆದ ಚಾಂಪಿಯನ್ಸ್ ಟ್ರೋಫಿ ಸಮಯದಲ್ಲಿ ಸೋಫಿ ಶೈನ್ ಮತ್ತು ಶಿಖರ್ ಧವನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ಅವರಿಬ್ಬರ ಪ್ರೇಮ ಸಂಬಂಧದ ಕುರಿತಾಗಿ ಸುದ್ದಿ ಹರಡುತ್ತಿದೆ. ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರ ಬಗ್ಗೆ ಮಾತನಾಡ...