ಭಾರತ, ಮಾರ್ಚ್ 26 -- ಬಾಲಿವುಡ್‌ನ ಸ್ಟಾರ್ ನಟ ಸೋನು ಸೂದ್ ಅವರ ಪತ್ನಿಯ ಹಾಗೂ ಅವರ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಸೋನು ಸೂದ್ ಅವರ ಪತ್ನಿ ಸೋನಾಲಿ ಸೂದ್, ಅವರ ಸಹೋದರಿ ಮತ್ತು ಸೋದರಳಿಯ ಗಾಯಗೊಂಡಿದ್ದಾರೆ. ಸೋಮವಾರ ರಾತ್ರಿ (ಮಾರ್ಚ್ 24) ಈ ಅಪಘಾತ ಸಂಭವಿಸಿದ್ದು, ಸೋನಾಲಿ ಸೂದ್ ಮತ್ತು ಅವರ ಸೋದರಳಿಯ ಇಬ್ಬರೂ ನಾಗ್ಪುರದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಸೋನಾಲಿ ಸೂದ್ ಕುಳಿತಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಸೋಮವಾರ ರಾತ್ರಿ 10.30 ಕ್ಕೆ ಅಪಘಾತ ಸಂಭವಿಸಿದೆ. ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಕರೆತರುವಾಗ ಅವರ ಸ್ಥಿತಿ ಸ್ಥಿರವಾಗಿತ್ತು ಎಂದು ನಾಗ್ಪುರದ ಮ್ಯಾಕ್ಸ್ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. ಗಾಯಗೊಂಡ ಎಲ್ಲರೂ ಪ್ರಜ್ಞೆ ಹೊಂದಿದ್ದರು ಮತ್ತು ಅವರ ಆರೋಗ್ಯ ಸ್ಥಿರವಾಗಿತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ: ರೀಲ್ಸ್‌ ವಿವಾದ: ಬಿಗ್‌ಬಾಸ್‌ ಖ್ಯಾತಿಯ ರಜತ್‌, ವಿ...