Bengaluru, ಮೇ 1 -- ಕಾಲಿವುಡ್‌ ಸ್ಟಾರ್‌ ನಟ ಸೂರ್ಯ ಇದೀಗ ಹೊಸ ಅವತಾರದ ಜತೆಗೆ ಚಿತ್ರಮಂದಿರಗಳಿಗೆ ಆಗಮಿಸಿದ್ದಾರೆ. ಅವರ ಬಹುನಿರೀಕ್ಷಿತ ʻರೆಟ್ರೋʼ ಸಿನಿಮಾ ಇಂದು (ಮೇ 1) ಬಿಡುಗಡೆ ಆಗಿದೆ. ಕಾರ್ತಿಕ್‌ ಸುಬ್ಬರಾಜು ನಿರ್ದೇಶನದ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಶೀರ್ಷಿಕೆಗೆ ತಕ್ಕಂತೆ ಮೂರು ವಿಭಿನ್ನ ಗೆಟಪ್‌ಗಳಲ್ಲಿ ಸೂರ್ಯ ಕಾಣಿಸಿದ್ದಾರೆ. ಟ್ರೇಲರ್‌ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಸಿನಿಮಾ, ಇದೀಗ ವಿಮರ್ಶೆ ದೃಷ್ಟಿಯಿಂದಲೂ ಚಿತ್ರ ಪ್ರೇಮಿಗಳನ್ನು ಮೋಡಿ ಮಾಡ್ತಾ? ಸಿನಿಮಾ ನೋಡಿದವರು ಏನಂದ್ರು? ಹೀಗಿದೆ ಟ್ವಿಟ್ಟರ್‌ ವಿಮರ್ಶೆ.

ನಟ ಸೂರ್ಯ ಅವರ ಸಿನಿಮಾಗಳು ಅದ್ಯಾಕೋ ಮೊದಲಿಂತೆ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿಲ್ಲ. ಬಹುಕೋಟಿ ವೆಚ್ಚದ ಸಿನಿಮಾಗಳು ಮಕಾಡೆ ಮಲಗಿವೆ. ಅದಕ್ಕೆ ಲೇಟೆಸ್ಟ್‌ ಉದಾಹರಣೆ ಕಂಗುವ ಸಿನಿಮಾ. ಸೂರ್ಯ ನಟನೆಯ ಸಿನಿಮಾಗಳಷ್ಟೇ ಅಲ್ಲದೆ, ತಾವೇ ಹಣ ಹೂಡಿ ನಿರ್ಮಿಸಿದ ಸಿನಿಮಾಗಳು ಅವರ ಕೈ ಹಿಡಿದಿಲ್ಲ. ಹಾಗಂತ ಸೂರ್ಯ ಅವರ ಕ್ರೇಜ್‌ಗೇನು ಕಡಿಮೆ ಆಗಿಲ್ಲ. ಇಂದಿಗೂ ಅವ...