ಭಾರತ, ಮಾರ್ಚ್ 25 -- ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ರೋಚಕ ಕದನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿರೋಚಿತ ಸೋಲು ಅನುಭವಿಸಿದ್ದಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ಪ್ರತಿಕ್ರಿಯಿಸಿದ್ದು, ನಿರಾಸೆ ಅನುಭವಿಸಿದ್ದಾರೆ. ಮಾರ್ಚ್ 24ರಂದು ವಿಶಾಖಪಟ್ಟಣದಲ್ಲಿ ನಡೆದ ಐಪಿಎಲ್​​ನ 4ನೇ ಪಂದ್ಯದಲ್ಲಿ ಲಕ್ನೋ ಸುಲಭ ಗೆಲುವು ಸಾಧಿಸುವ ಹಂತದಲ್ಲಿತ್ತು. ಆದರೆ ಅಶುತೋಷ್ ಶರ್ಮಾ ಮತ್ತು ವಿಪ್ರಜ್ ನಿಗಮ್ ತಮ್ಮ ವೀರಾವೇಶದ ಬ್ಯಾಟಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಎಲ್​ಎಸ್​ಜಿ ಗೆಲುವನ್ನು ಡೆಲ್ಲಿಯತ್ತ ವರ್ಗಾಯಿಸಿ 1 ವಿಕೆಟ್ ರೋಚಕ ಜಯ ಸಾಧಿಸಿದರು.

65ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಗೆಲುವಿಗೆ ಇನ್ನೂ 145 ರನ್ ಬೇಕಿತ್ತು. ಅದು ಕೂಡ ಕೇವಲ 80 ಎಸೆತಗಳಿಗೆ. ವಿಕೆಟ್​ಗಳು ಇಲ್ಲದಿದ್ದ ಈ ಹಂತದಲ್ಲಿ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟು ತಂಡವನ್ನು ಒಂದು ಹಂತಕ್ಕೆ ತಂದಿಟ್ಟಿದ್ದು ಟ್ರಿಸ್ಟಾನ್ ಸ್ಟಬ್ಸ್. ಬಳಿಕ ಅದನ್ನು ಅಶುತೋಷ್​ ಮತ್ತು ವಿಪ್ರಜ್ ಮುಂದುವರೆಸಿದ...