ಭಾರತ, ಮಾರ್ಚ್ 23 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್​ ಮಾರ್ಚ್​ 22ರಿಂದ​ ಅದ್ಧೂರಿ ಆರಂಭ ಪಡೆಯಿತು. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್​ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ. ಪಂದ್ಯದಲ್ಲಿ ಕೆಕೆಆರ್ ಸೋತರೂ ನಾಯಕ ಅಜಿಂಕ್ಯ ರಹಾನೆ ಅವರ ಬ್ಯಾಟ್ ಆರ್​ಸಿಬಿ ಮುಂದೆ ಘರ್ಜಿಸಿ ಬಿರುಗಾಳಿಯ ಅರ್ಧಶತಕ ಬಾರಿಸಿದರು. ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅನುಭವಿ ಬ್ಯಾಟರ್ 31 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 56 ರನ್ ಗಳಿಸಿದರು. ಅವರನ್ನು ಕೃನಾಲ್ ಪಾಂಡ್ಯ ಔಟ್ ಮಾಡಿದರು. 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಹಾನೆ ಅವರ ಐಪಿಎಲ್ ವೃತ್ತಿಜೀವನದ 31ನೇ ಅರ್ಧಶತಕ ಇದು. ಇದರೊಂದಿಗೆ ದಾಖಲೆ ನಿರ್ಮಿಸಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಜೋಶ್ ಹೇಜಲ್‌ವುಡ್ ಎಸೆದ ಮೊದಲ ಓವರ್‌ನಲ್ಲಿ ಕ್ವಿಂಟನ್ ಡ...