ಭಾರತ, ಮಾರ್ಚ್ 25 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 24ರ ಸಂಚಿಕೆಯಲ್ಲಿ ಅತ್ತೆ ತನ್ನನ್ನು ಎಂದಿಗೂ ಸೊಸೆ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದು ಕೇಳಿ ಶ್ರಾವಣಿಗೆ ದುಃಖ ಉಮ್ಮಳಿಸಿ ಬರುತ್ತದೆ. ರೂಮ್‌ನಲ್ಲಿ ಬಂದು ಬೇಸರದಲ್ಲಿ ಕುಳಿತ ಅವಳಿಗೆ ಸುಬ್ಬು 'ಯಾಕೇ ಮೇಡಂ ಬೇಜಾರಲ್ಲಿ ಇದೀರಾ ಎಂದು ಪ್ರಶ್ನೆ ಮಾಡುತ್ತಾನೆ' ಅವನು ಅಷ್ಟು ಕೇಳಿದ್ದಕ್ಕೆ ಖುಷಿ ಪಡುವ ಶ್ರಾವಣಿ 'ಸುಬ್ಬು ನಿನಗೆ ನಾನು ಬೇಸರದಲ್ಲಿ ಇರೋದು ಗೊತ್ತಾಗುತ್ತೆ ಅಲ್ವಾ, ಆದರೂ ನೀನು ನನ್ನ ಜೊತೆ ಮೊದಲಿನ ರೀತಿ ಇರ್ತಾ ಇಲ್ಲ. ಮೊದಲಿನ ಹಾಗೆ ನನ್ನ ನೋವು, ದುಃಖದಲ್ಲಿ ನೀನು ಜೊತೆ ನಿಲ್ತಾ ಇಲ್ಲ' ಎಂದು ಹುಸಿಮುನಿಸಿನಲ್ಲಿ ಹೇಳುತ್ತಾರೆ. ಅದಕ್ಕೆ ಸುಬ್ಬು 'ಮೇಡಂ ನೀವು ಯಾವಾಗ ಮದುವೆ ಮನೆಯಲ್ಲಿ ನನ್ನ ಅಕ್ಕ ಬಂದು ನಿಂತ್ರೋ ಆಗ ನನಗೆ ಇನ್ನೆಂದು ನಿನ್ನ ಜೊತೆ ನಿಲ್ಲಬಾರದು ಎಂದು ಅನ್ನಿಸಿತ್ತು' ಎಂದು ಹೇಳುತ್ತಾನೆ.

ಅವನ ಮಾತು ಕೇಳಿ ಶ್ರಾವಣಿಗೆ ಜೋರಾಗಿ ಅಳು ಬರುತ್ತದೆ. ಅವಳ ಅಳು ನೋಡಿದ ಸುಬ್ರಹ್...