Bengaluru, ಮಾರ್ಚ್ 9 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಕೋ ಜಯಂತನ ದುಷ್ಟ ಅವತಾರಗಳನ್ನು ದಾಖಲೆ ಸಮೇತ ಕಂಡ ಜಾಹ್ನವಿ ಮತ್ತೆ ಮೊದಲಿನಂತೆ ಆಗಲು ಸಾಧ್ಯವೇ ಇಲ್ಲ ಎನ್ನುವಷ್ಟು ಸೊರಗಿದ್ದಾಳೆ. ದೈಹಿಕವಾಗಿ ಆಕೆ ಚೆನ್ನಾಗಿದ್ದರೂ, ಅವಳ ಮನಸ್ಸಿನಲ್ಲಿ ಮಾತ್ರ ವಿವಿಧ ರೀತಿಯ ಆಲೋಚನೆಗಳು ಮೂಡುತ್ತಿವೆ. ಅದರಿಂದಾಗಿ ಅವಳು ಕಿರಿಕಿರಿ ಅನುಭವಿಸುವಂತಾಗಿದೆ. ಅಲ್ಲದೆ, ಜಯಂತ್ ನಡೆ ಅವಳಿಗೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಜಯಂತ್‌ನ ದುಷ್ಕೃತ್ಯಗಳನ್ನು ನೋಡಿದ ಬಳಿಕ ಆಕೆಗೆ ಗರ್ಭಪಾತವಾಗಿದೆ. ಒಂದೆಡೆ ಮಗುವನ್ನು ಕಳೆದುಕೊಂಡ ನೋವಿನಲ್ಲಿ ಜಾಹ್ನವಿ ಇದ್ದರೆ, ಮತ್ತೊಂದೆಡೆ ತಾನು ಅತಿಯಾಗಿ ನಂಬಿದ್ದ ಮತ್ತು ಹೆಚ್ಚು ಪ್ರೀತಿಸುತ್ತಿದ್ದ ಗಂಡನೇ ನನ್ನ ಬಾಳಿಗೆ ವಿಲನ್ ಆಗಿ ಬಂದಿದ್ದಾನೆ ಎನ್ನುವುದನ್ನು ಆಕೆಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಆಕೆ ಮಾನಸಿಕವಾಗಿ ಕುಸಿದು ಹೋಗಿದ್ದಾಳೆ.

ಅಜ್ಜಿಯನ್ನು ಜಾಹ್ನವಿ ಈಗಾಗಲೇ ಅಪ್ಪ ಶ್ರೀನಿವಾಸ್‌ರನ್ನು ಬರಲು ಹೇಳಿ, ಅವರ ಮೂಲಕ ಮನೆಗೆ ಕಳುಹಿಸಿಕೊಟ್ಟಿದ್ದಾಳ...