ಭಾರತ, ಮಾರ್ಚ್ 31 -- ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸದ್ಯ ಜಯಂತ್‌ -ಜಾಹ್ನವಿ ಮತ್ತು ಭಾವನಾ ಸಿದ್ದೇಗೌಡ್ರು ಶ್ರೀಲಂಕಾದಲ್ಲಿ ಮುಖಾಮುಖಿಯಾಗಿದ್ದಾರೆ. ಎಲ್ಲರೂ ಸೇರಿ ಒಂದಷ್ಟು ಸ್ಥಳಗಳನ್ನು ಸುತ್ತಾಡಿದ್ದಾರೆ. ಒಟ್ಟಿಗೆ ಊಟ ಮಾಡಿದ್ದಾರೆ.

ಬಳಿಕ ತಂತಮ್ಮ ರೂಮಿಗೆ ತೆರಳಿದ್ದಾರೆ. ಜಯಂತನಿಗೂ ನಿದ್ದೆ ಮಾತ್ರೆ ನೀಡಿ, ಸಚಿನ್‌ ಜತೆಗೆ ಜಯಂತ್‌ನ ಇನ್ನೊಂದು ಮುಖವನ್ನು ತಿಳಿದುಕೊಂಡಿದ್ದಾಳೆ. ಜಯಂತನ ಅಸಲಿ ಹೆಸರು, ಆತನ ಊರು ಎಲ್ಲವನ್ನೂ ಸಚಿನ್‌ ಸಹಾಯದಿಂದ ಗೊತ್ತು ಮಾಡಿಕೊಂಡಿದ್ದಾಳೆ.

ಇದೆಲ್ಲವನ್ನು ಕೇಳಿ ಅರೇ ಕ್ಷಣ ನಡುಗಿಹೋಗಿದ್ದಾಳೆ ಜಾನು. ಎಂಥ ವ್ಯಕ್ತಿಯನ್ನು ನಾನು ಮದುವೆಯಾದೆ, ಇವನನ್ನು ಕ್ಷಮಿಸುವುದಾದರೂ ಹೇಗೆ? ಇವನ ಜೊತೆ ನಾನು ಹೇಗೆ ಬದುಕಲಿ? ಎಂದು ಮರಗುತ್ತಿದ್ದಾಳೆ.

ನನ್ನ ಅಜ್ಜಿಯನ್ನು ಕೊಲ್ಲಲು ಪ್ರಯತ್ನಿಸಿದ, ನನ್ನ ಮಗುವನ್ನೇ ಬಲಿ ಪಡೆದ ಎಂದು ಶಪಿಸುತ್ತಿದ್ದಾಳೆ ಜಾನು. ಹೀಗಿರುವಾಗಲೇ, ಯಾವತ್ತೂ ಮಾಡದ ಗಟ್ಟಿ ನಿರ್ಧಾರ ಮಾಡಿದ್ದಾಳೆ ಜಾಣು. ತಾನೇ ಸಾಯುವ ನಿರ್ಧಾರಕ್ಕೆ ಬಂದಿದ್ದಾಳೆ.

ಕ್ರೂಸ್‌ ಹಡಗಿನಲ್...