ಭಾರತ, ಏಪ್ರಿಲ್ 10 -- ಜೀ ಕನ್ನಡದ ಪ್ರಸಿದ್ಧ ರಿಯಾಲಿಟಿ ಷೋಗಳಾದ ಸರಿಗಮಪ ಹಾಗೂ ಭರ್ಜರಿ ಬ್ಯಾಚುಲರ್ಸ್‌ನ ಮಹಾಸಂಗಮ ಕಳೆದ ವಾರಾಂತ್ಯ ಪ್ರಸಾರವಾಗಿತ್ತು. ಸರಿಗಮಪ ಶೋ ಸ್ಪರ್ಧಿಗಳು ಹಾಡಿ ರಂಜಿಸುವುದಷ್ಟೇ ಅಲ್ಲ, ಭರ್ಜರಿ ಬ್ಯಾಚುಲರ್ಸ್‌ ಸ್ಪರ್ಧಿಗಳ ಜತೆ ಸೇರಿ ಡಾನ್ಸನ್ನೂ ಮಾಡಿದ್ದಾರೆ. ಎರಡೂ ಶೋಗಳ ಸ್ಪರ್ಧಿಗಳ ಜತೆಗೆ ತೀರ್ಪುಗಾರರೂ ಕಳೆದ ವಾರಾಂತ್ಯದಲ್ಲಿ ಒಂದೇ ಕಡೆ ಕಾಣಿಸಿಕೊಂಡು ಎಂಜಾಯ್‌ ಮಾಡಿದ್ದಾರೆ. ಸ್ಪರ್ಧಿಗಳು ಮೈಚಳಿ ಬಿಟ್ಟು ರೊಮ್ಯಾಂಟಿಕ್‌ ಹಾಡುಗಳಿಗೆ ಹೆಜ್ಜೆ ಹಾಕಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಬಾಳು ಬೆಳಗುಂದಿ ಮತ್ತು ಗಗನಾ ಡಾನ್ಸ್ ಬಗ್ಗೆ ಪ್ರೇಕ್ಷಕರು ಅಸಮಾಧಾನಗೊಂಡಿದ್ದಾರೆ. ಮಾತ್ರವಲ್ಲ ಕಾಮೆಂಟ್ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಭೀಮ ಸಿನಿಮಾದ 'ಸೈಕಾಗೋದೆ... ಸೈಕಾದೆ' ಹಾಡಿಗೆ ಸಖತ್ ಬೋಲ್ಡ್ ಆಗಿ ಡಾನ್ಸ್ ಮಾಡಿದ್ದರು ಸರಿಗಮಪ ಸ್ಪರ್ಧಿಯ ಬಾಳು ಬೆಳಗುಂದಿ ಹಾಗೂ ಭರ್ಜರಿ ಬ್ಯಾಚುಲರ್ಸ್‌ನ ಗಗನಾ ಭಾರಿ. ಇವರ ಕುಣಿತ ನೋಡಿ ಸರಿಗಪಮ ಸ್ಪರ್ಧಿಗಳ ಜತೆಗೆ ಭರ್ಜರಿ ಬ್ಯಾಚುಲರ್ಸ್‌ ಶೋನ ಸ್ಪರ್ಧಿಗ...