ಭಾರತ, ಏಪ್ರಿಲ್ 27 -- ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ 2ನೇ ಬಾರಿಗೆ ಮುಖಾಮುಖಿಯಾಗಲು ಸಜ್ಜಾಗಿವೆ. ಇದು ಐಪಿಎಲ್​ನ 46ನೇ ಪಂದ್ಯ. ಏಪ್ರಿಲ್ 27ರಂದು ಸಂಜೆ 7.30ಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಏಪ್ರಿಲ್ 10ರಂದು ನಡೆದಿದ್ದ ಪಂದ್ಯದಲ್ಲಿ ಆರ್​​​ಸಿಬಿ ವಿರುದ್ಧ ತಂಡವನ್ನು ಅವರದ್ದೇ ಪಿಚ್​​ನಲ್ಲಿ ಅಕ್ಷರ್​ ಪಟೇಲ್ ನೇತೃತ್ವದ ಡೆಲ್ಲಿ ಸೋಲಿಸಿತ್ತು. ಇದೀಗ ಆ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳಲು ಆರ್​​ಸಿಬಿ ಸಿದ್ಧತೆ ನಡೆಸಿದೆ.

8 ಪಂದ್ಯಗಳಲ್ಲಿ 6 ಗೆಲುವು, 2 ಸೋಲು ಕಂಡಿರುವ ಡಿಸಿ, 12 ಅಂಕ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 9 ಪಂದ್ಯ ಆಡಿರುವ ರಾಯಲ್ ಚಾಲೆಂಜರ್ಸ್​ ಅಷ್ಟೇ ಗೆಲುವು ಸಾಧಿಸಿ 12 ಅಂಕ ಪಡೆದಿದೆ. ಆದರೆ ಮೂರು ಪಂದ್ಯಗಳನ್ನು ಸೋತಿದೆ. ಇನ್ನು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿರುವ ಆರ್​​ಸಿಬಿ, ತವರಿನ ಹೊರಗಿನ ಪಿಚ್​​​ಗಳಲ್ಲಿ ಇದುವರೆಗೂ ಒಂದು ಪಂದ್ಯ ಸೋತಿಲ್ಲ. ಇದು ತಂಡದ ಅತಿ ದೊಡ್ಡ ಬಲವಾಗಿದೆ. ಡೆಲ್ಲಿ ಪಿಚ್ ಕೊಹ್ಲ...