ಭಾರತ, ಮಾರ್ಚ್ 1 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ದಕ್ಷಿಣ ಆಫ್ರಿಕಾ 4ನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. 'ಬಿ' ಗುಂಪಿನ ಭಾಗವಾಗಿರುವ ದಕ್ಷಿಣ ಆಫ್ರಿಕಾ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್​​ಗಳಿಂದ ಮಣಿಸಿ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯಿತು. ಇಂಗ್ಲೆಂಡ್ ಸೋಲಿನ 'ತ್ರಿವಳಿ ದುಃಖ' ಅನುಭವಿಸಿದೆ. ಲೀಗ್ ಹಂತದಲ್ಲಿ ಇಂಗ್ಲೆಂಡ್ ಒಂದೇ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗದೆ ಅಭಿಯಾನ ಮುಗಿಸಿತು. ಇದಕ್ಕೂ ಮುನ್ನ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ವಿರುದ್ಧ ಸೋತಿತು. ಆದರೆ ನಾಕೌಟ್ ಪ್ರವೇಶಿಸಿರುವ ಸೌತ್ ಆಫ್ರಿಕಾ, ಸೆಮೀಸ್​ನಲ್ಲಿ ಯಾವ ತಂಡವನ್ನು ಎದುರಿಸಲಿದೆ ಎನ್ನುವುದು ಇನ್ನಷ್ಟೆ ಗೊತ್ತಾಗಲಿದೆ.

ಕರಾಚಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ಕಳಪೆ ಬ್ಯಾಟಿಂಗ್ ನಿರ್ವಹಿಸಿದ ಇಂಗ್ಲೆಂಡ್, 38.2 ಓವರ್​​ಗಳಲ್ಲಿ 179 ರನ್​ಗೆ​​ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 29.1 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಸುಲಭವಾಗಿ ಗುರಿ ತಲುಪಿತು. ಅಫ...