ಭಾರತ, ಫೆಬ್ರವರಿ 25 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿರುವ ಹಾಗೂ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಲು ಮುಂದಾಗಿರುವ ಇಂಗ್ಲೆಂಡ್​ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಬಲಗೈ ವೇಗಿ ಬ್ರೈಡನ್ ಕಾರ್ಸ್ ಕಾಲ್ಬೆರಳು ಗಾಯದಿಂದಾಗಿ ಪಂದ್ಯಾವಳಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಸ್ಪಿನ್ನರ್ ರೆಹಾನ್ ಅಹ್ಮದ್ ಅವರನ್ನು ಅವರ ಬದಲಿ ಆಟಗಾರನಾಗಿ ಕರೆಸಿಕೊಳ್ಳಲಾಗಿದೆ.

ಎಡಗಾಲಿನ ಕಾಲ್ಪೆರಳು ಗಾಯದಿಂದಾಗಿ ಡರ್ಹ್ಯಾಮ್ ಮತ್ತು ಇಂಗ್ಲೆಂಡ್ ಬೌಲಿಂಗ್ ಆಲ್​​ರೌಂಡರ್​ ಬ್ರೈಡನ್ ಕಾರ್ಸ್ ಅವರು ಪುರುಷರ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ಕಾರ್ಸ್ ಆಟದಿಂದ ಹೊರಗುಳಿದ ಕಾರಣ ಜೇಮಿ ಓವರ್ಟನ್ ಇಂಗ್ಲೆಂಡ್​ನ ಪ್ಲೇಯಿಂಗ್ 11ಗೆ ಬದಲಿ ಆಟಗಾರನಾಗಿ ಮರಳಬಹುದು.

ಲಾಹೋರ್​​ನ ಶನಿವಾರ (ಫೆ 22) ನಡೆದ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಕಾರ್ಸ್ ಗಾಯಗೊಂಡಿದ್ದರು. ಕಾಲ್ಬೆರಳು...