ಭಾರತ, ಫೆಬ್ರವರಿ 25 -- ದುಬೈ ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ಅಜೇಯ ಶತಕ (100) ಸಹಾಯದಿಂದ ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಕದನವನ್ನು ಯಶಸ್ವಿಯಾಗಿ ಮುಗಿಸಿರುವ ಭಾರತ ತಂಡ, ಚಾಂಪಿಯನ್ಸ್ ಟ್ರೋಫಿಯ ಅಂತಿಮ ಲೀಗ್ ಪಂದ್ಯದಲ್ಲಿ ಮತ್ತೊಂದು ಬಲಿಷ್ಠ ತಂಡವಾದ ನ್ಯೂಜಿಲೆಂಡ್ ಸವಾಲಿಗೆ ಸಜ್ಜಾಗಿದೆ. ಆಡಿದ 2ಕ್ಕೆ ಎರಡನ್ನೂ ಗೆದ್ದು ಗ್ರೂಪ್ ಎ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ರೋಹಿತ್​ ಪಡೆ, ಐಸಿಸಿ ಟೂರ್ನಿಗಳಲ್ಲಿ ಪದೆಪದೇ ಕಂಟಕವಾಗುವ ಕಿವೀಸ್ ತಂಡದ ವಿರುದ್ಧ ಮಾರ್ಚ್ 2ರಂದು ಸೆಣಸಲಿದೆ.

ಸತತ ಎರಡು ಗೆಲುವುಗಳೊಂದಿಗೆ ಬಹುತೇಕ ಸೆಮಿಫೈನಲ್ ಪ್ರವೇಶ ಸ್ಥಾನ ಖಾತ್ರಿಪಡಿಸಿರುವ ಭಾರತ, ಉಳಿದೊಂದು ಪಂದ್ಯವನ್ನೂ ಗೆದ್ದು ಅಗ್ರಸ್ಥಾನಿಯಾಗಿ ನಾಲ್ಕರ ಘಟ್ಟಕ್ಕೇರಲು ಯೋಜನೆ ಹಾಕಿಕೊಂಡಿದೆ. ಅತ್ತ ನ್ಯೂಜಿಲೆಂಡ್ ತನ್ನ ಎರಡೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಜಯದೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದು ತಲಾ ಎರಡು ಪಂದ್ಯ ಸೋತಿರುವ ಬ...