Bengaluru, ಏಪ್ರಿಲ್ 18 -- ಬೇಸಿಗೆಯ ತಾಪಮಾನ ಹೆಚ್ಚಿರುವುದರಿಂದ ಚೆನ್ನಾಗಿ ಅಥವಾ ಆರಾಮವಾಗಿ ನಿದ್ದೆ ಮಾಡುವುದು ಕಷ್ಟ. ಸರಿಯಾಗಿ ನಿದ್ದೆ ಮಾಡದಿದ್ದರೆ ನಿದ್ರಾಹೀನತೆ, ಚರ್ಮದ ಸಮಸ್ಯೆ, ನಿರ್ಜಲೀಕರಣ, ಆಯಾಸ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿದ್ರೆ ದೇಹಕ್ಕೆ ಅತಿ ಮುಖ್ಯ. ಕಡಿಮೆ ನಿದ್ರೆಯಿಂದ ಹೆಚ್ಚು ಪರಿಣಾಮ ಅನುಭವಿಸಬೇಕಾದೀತು. ಈ ಸೆಖೆಯಲ್ಲಿ ಉತ್ತಮನಿದ್ದೆಯನ್ನು ಪಡೆಯಲು ಬಯಸಿದರೆ ಇಲ್ಲಿ ನೀಡಿರುವ ಕೆಲವು ಸಲಹೆಗಳನ್ನು ಪಾಲಿಸಬಹುದು.

ಉಸಿರಾಡಲು ಸುಲಭವಾಗುವಂತಹ ಬೆಡ್‌ ಆರಿಸಿ: ಕಾಟನ್ ಮತ್ತು ಲೆನಿನ್‌ನಿಂದ ಕೂಡಿರುವ ಬೆಡ್‌ಶಿಟ್‌ಗಳನ್ನು ಆಯ್ದುಕೊಳ್ಳಿ. ಇದು ತೇವಾಂಶ ಹೀರಿಕೊಳ್ಳುವ ಮೂಲಕ ಉಸಿರಾಡಲು ಶುಚಿ ಗಾಳಿಯನ್ನು ನೀಡುತ್ತದೆ. ಸಂಶ್ಲೇಷಿತ ಬಟ್ಟೆ ಅಥವಾ ಬೆಡ್‌ಶಿಟ್‌ಗಳನ್ನು ತಪ್ಪಿಸಿ. ಏಕೆಂದರೆ ಅವು ಹೆಚ್ಚು ಶಾಖವನ್ನು ಹಿಡಿದಿಟ್ಟುಕೊಳ್ಳುವುದರಿಂದ ಗಾಳಿ ಕೊರತೆಯಾಗಿ ಹೆಚ್ಚು ಬೆವರುವಂತೆ ಮಾಡುತ್ತದೆ.

ಕೋಣೆಯನ್ನು ತಂಪಾಗಿಸಿ: ನೀವು ಮಲಗುವ ಮುನ್ನ ಕೋಣೆಯನ್ನು ತಂಪಾಗಿಸಿ. ಬಿಸಿಲಿನ ಬ...