Bengaluru, ಜನವರಿ 29 -- Lakshmi Nivasa Serial: ಮಗ ಸೊಸೆಯನ್ನು ಮನೆಗೆ ಜವರೇಗೌಡ ಕರೆತಂದಿದ್ದಾರೆ. ಆದರೆ ಸಿದ್ದೇಗೌಡ ಮತ್ತು ಭಾವನಾ ಜತೆಗೆ ಮನೆಗೆ ಮರಳಿದ್ದು, ಮನೆಯವರಿಗೆ ಇಷ್ಟವಾಗಿಲ್ಲ. ಮರಿಗೌಡ ಒಬ್ಬನೇ ಈ ವಿಚಾರವಾಗಿ ಖುಷಿಪಟ್ಟಿದ್ದು ಬಿಟ್ಟರೆ ಮತ್ತೆ ಉಳಿದವರು ಸಿದ್ದೇಗೌಡ ಇರಲಿ, ಭಾವನಾ ಯಾಕೆ ಬರಬೇಕಿತ್ತು ಎಂದು ಹೇಳುತ್ತಾರೆ. ಅಲ್ಲದೆ, ಸಿದ್ದೇಗೌಡನನ್ನು ಹೊರಗಡೆ ಕರೆದುಕೊಂಡು ಹೋಗಿ ಅಕ್ಸಿಡೆಂಟ್ ಸಂಗತಿಯನ್ನು ಜವರೇಗೌಡ ಹೇಳಿದಾಗಿನಿಂದ ಸಿದ್ದೇಗೌಡನಿಗೆ ಆಘಾತವಾಗಿದೆ. ಶ್ರೀಕಾಂತ್ ಸಾವಿಗೆ ಸಿದ್ದೇಗೌಡ ತೀವ್ರ ಪಶ್ಚಾತಾಪಪಟ್ಟು, ಊಟ ನಿದ್ರೆ ಬಿಟ್ಟಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದೆ.

ಮತ್ತೊಂದೆಡೆ, ಭಾವನಾಳಿಂದಾಗಿಯೇ ನನಗೆ ಮಂತ್ರಿಯೋಗ ಬಂದಿದೆ, ಮುಂದೆ ಮುಖ್ಯಮಂತ್ರಿಯೂ ಆಗುವವನಿದ್ದೇನೆ. ಸಮಾಜದ, ಮಾಧ್ಯಮದ ಕಣ್ಣು ನಮ್ಮ ಕುಟುಂಬದ ಮೇಲಿದೆ. ಹೀಗಾಗಿ ನಾವೆಲ್ಲ ಒಗ್ಗಟ್ಟಿನಿಂದ ಇರಬೇಕು, ನಮ್ಮ ಮನೆಯ ಸೊಸೆಯನ್ನೇ ಮನೆಯಿಂದ ಹೊರಗೆ ಹಾಕಿದ್ದೇವೆ ಎಂದು ಊರವರು ಮಾತನಾಡಿಕೊಳ್ಳುವಂತಾಗಬಾರದು ಎಂದು ಜವರೇಗೌಡ ಮನ...