ಭಾರತ, ಮಾರ್ಚ್ 4 -- ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನಾ' ಬಿಡುಗಡೆಯಾಗಿ 91 ವರ್ಷಗಳಾಗಿವೆ. ಚಿತ್ರವು 1934ರ ಮಾರ್ಚ್ 03ರಂದು ಮೊದಲು ಆಗಿನ ಕೆ.ಆರ್. ಮಾರುಕಟ್ಟೆ ಪ್ರದೇಶದ ಪ್ಯಾರಾಮೌಂಟ್‍ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಅದಕ್ಕೂ ಮೊದಲು ಕನ್ನಡದಲ್ಲಿ ಹಲವು ಮೂಕಿ ಚಿತ್ರಗಳು ತಯಾರಾಗಿದ್ದವು. 'ಸತಿ ಸುಲೋಚನಾ' ನಂತರದಲ್ಲಿ ಕನ್ನಡದಲ್ಲಿ ಮಾತನಾಡುವ ಚಿತ್ರಗಳು ಬಿಡುಗಡೆಯಾದವು.

'ಸತಿ ಸುಲೋಚನಾ' ಕನ್ನಡದಲ್ಲಿ ಮೊದಲ ವಾಕ್ಚಿತ್ರ ಚಿತ್ರ ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಅದು ಹೇಗೆ ಶುರುವಾಯಿತು? ಹೇಗೆ ನಿರ್ಮಾಣವಾಯಿತು? ಯಾರೆಲ್ಲಾ ಈ ಚಿತ್ರದ ತಯಾರಿಕೆಯಲ್ಲಿ ಭಾಗಿಯಾಗಿದ್ದರು? ಮುಂತಾದ ಹಲವು ವಿಷಯಗಳ ಬಗ್ಗೆ ಕನ್ನಡಿಗರಲ್ಲಿ ಮಾಹಿತಿ ಇಲ್ಲ. ಇದನ್ನು ತಿಳಿಸಿಕೊಡುವುದಕ್ಕೆ ಇದೀಗ ಪಿ. ಶೇಷಾದ್ರಿ ಮತ್ತು ಸೃಜನ್‍ ಲೋಕೇಶ್ ಜೊತೆಯಾಗಿದ್ದಾರೆ. 'ಸತಿ ಸುಲೋಚನಾ' ನಿರ್ಮಾಣದ ಕುರಿತು ಅವರು 'ಸತಿ ಸುಲೋಚನಾ- 3-3-34' ಎಂಬ ಹೊಸ ಚಿತ್ರ ತಯಾರಿಸುತ್ತಿದ್ದಾರೆ.

'ಸತಿ ಸುಲೋಚನಾ' ಚಿತ್ರದಲ್ಲಿ ಸುಬ್ಬಯ್ಯ ನಾಯ್ಡು, ಆರ್....