Bengaluru, ಮೇ 29 -- ನವ ಪ್ರತಿಭೆ ಗೀತಪ್ರಿಯಾ ಮೊದಲ ಬಾರಿಗೆ ನಿರ್ಮಿಸಿ ಜೊತೆಗೆ ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ತಾಯವ್ವ' ಚಿತ್ರ ರಾಜ್ಯದಾದ್ಯಂತ ನಾಳೆ (ಮೇ. 30) ತೆರೆಗೆ ಬರಲಿದೆ. ಸುಮಾರು ಮೂರು ದಶಕದ ಹಿಂದೆಯೇ 'ತಾಯವ್ವ' ಎಂಬ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬಂದಿದ್ದು, ಆ ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಮತ್ತು ನಟ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಈಗ ಅದೇ 'ತಾಯವ್ವ' ಹೆಸರಿನಲ್ಲಿ ಹೊಸ ಚಿತ್ರ ತಯಾರಾಗಿದ್ದು, ಇದೇ ಶುಕ್ರವಾರ ತೆರೆಗೆ ಬರಲಿದೆ.

ಇನ್ನು 'ತಾಯವ್ವ' ಚಿತ್ರದ ಹೆಸರೇ ಹೇಳುವಂತೆ, ಇದು ಅಪ್ಪಟ ಗ್ರಾಮೀಣ ಸೊಗಡಿನ, ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಸಾಮಾಜಿಕ ಕಳಕಳಿಯ ಚಿತ್ರ. ಗ್ರಾಮೀಣ ಪ್ರದೇಶದ ಸೂಲಗಿತ್ತಿ ಮಹಿಳೆಯೊಬ್ಬಳು ಹೇಗೆ ಹೆಣ್ಣುಮಕ್ಕಳ ರಕ್ಷಣೆ ಮಾಡಿ, ಸಮಾಜಕ್ಕೆ ಮಾದರಿಯಾಗುತ್ತಾಳೆ ಎಂಬ ವಿಷಯದ ಸುತ್ತ 'ತಾಯವ್ವ' ಚಿತ್ರದ ಕಥಾಹಂದರ ಸಾಗುತ್ತದೆ. ಚಿತ್ರದಲ್ಲಿ 'ತಾಯವ್ವ' ಪಾತ್ರದಲ್ಲಿ ಗೀತಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ....