ಭಾರತ, ಮಾರ್ಚ್ 7 -- ಸೂರ್ಯೋದಯವನ್ನು ಜನರು ಎಷ್ಟು ಇಷ್ಟಪಡುತ್ತಾರೋ ಹಾಗೆ ಸೂರ್ಯ ಮುಳುಗುವುದನ್ನು ಕಣ್ತುಂಬಿಕೊಳ್ಳಲು ಕಾತುರರಾಗಿರುತ್ತಾರೆ. ಇದಕ್ಕೆ ಉದಾಹರಣೆಯೆಂದರೆ, ಆಗುಂಬೆ, ಗೋಕರ್ಣ ಸೇರಿದಂತೆ ವಿವಿಧ ಬೀಚ್, ಪರ್ವತ ಶ್ರೇಣಿಗಳಲ್ಲಿ ಸಂಜೆ ವೇಳೆ ಕಂಡುಬರುವ ಅಪಾರ ಜನಸಂದಣಿಯೇ ಪ್ರತ್ಯಕ್ಷ ಸಾಕ್ಷಿ ಎನ್ನಬಹುದು. ಆದರೆ, ಇನ್ನೂ ಕೆಲವರಿಗೆ ಈ ಸೂರ್ಯಾಸ್ತ ಆತಂಕ ಅಥವಾ ಭಯ ಹೆಚ್ಚಿಸೋ ಸಮಯವಾಗಬಹುದು. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ಈ ಸೂರ್ಯಾಸ್ತದ ಆತಂಕವನ್ನು ಅನಾರೋಗ್ಯದ ಲಕ್ಷಣವೆಂದು ಪರಿಗಣಿಸದಿದ್ದರೂ ಇದು ನಿಜವೆಂದು ಮಾನಸಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ಅಮೆರಿಕದ ವಯಸ್ಕ ಜನಸಂಖ್ಯೆಯ ಸುಮಾರು 20 ರಷ್ಟು ಜನರು ಸೂರ್ಯಾಸ್ತದ ವೇಳೆ ಹೆಚ್ಚು ಆತಂಕಕ್ಕೆ ಒಳಪಡುತ್ತಾರೆ ಎಂದು ಅಂದಾಜಿಸಿದ್ದಾರೆ.

ಡಯಗ್ನೊಸ್ಟಿಕ್ ಅಂಡ್ ಸ್ಟ್ಯಾಟಿಸ್ಟಿಕಲ್ ಆಫ್ ಮೆಂಟಲ್ ಡಿಸ್‌ಆರ್ಡರ್ (DSM-5) ಅವರ ಪ್ರಕಾರ, ಸೂರ್ಯಾಸ್ತದ ಆತಂಕವು ಅನಾರೋಗ್ಯದ ಲಕ್ಷಣವಲ್ಲ ಎಂದು ತಿಳಿಸಿದ್ದು, ಇದಕ್ಕೆ ಅನುಗುಣವಾಗಿ ಅನೇಕ ...