Bengaluru, ಮೇ 11 -- ಅರ್ಥ: ಯಾವ ಜ್ಞಾನವನ್ನು ತಿಳಿದುಕೊಂಡು ನೀನು ಅಮೃತತ್ವವನ್ನು ಸವಿಯುವೆಯೋ ಆ ಜ್ಞೇಯವಾದುದನ್ನು ವಿವರಿಸುತ್ತೇನೆ. ಅನಾದಿಯಾದ ಮತ್ತು ನನಗೆ ಅಧೀನವಾದ ಬ್ರಹ್ಮನ್ ಈ ಐಹಿಕ ಜಗತ್ತಿನ ಕಾರ್ಯ-ಕಾರಣದಾಚೆ ಇದೆ.

ಭಾವಾರ್ಥ: ಪ್ರಭುವು ಕ್ಷೇತ್ರವನ್ನೂ ಕ್ಷೇತ್ರಜ್ಞನನ್ನೂ ವಿವರಿಸಿದ್ದಾನೆ. ಕ್ಷೇತ್ರಜ್ಞನನ್ನು ತಿಳಿದುಕೊಳ್ಳಲು ಪ್ರಕ್ರಿಯೆಯನ್ನೂ ಅವನು ವಿವರಿಸಿದ್ದಾನೆ. ಈಗ ಅವನು ಜ್ಞೇಯವನ್ನು, ಎಂದರೆ ತಿಳಿದುಕೊಳ್ಳಲು ಸಾಧ್ಯವಿರುವುದನ್ನು, ವಿವರಿಸಲು ಪ್ರಾರಂಭಿಸುತ್ತಾನೆ. ಮೊದಲು ಆತ್ಮನನ್ನು ಅನಂತರ ಪರಮಾತ್ಮನನ್ನು ವಿವರಿಸುತ್ತಾನೆ. ಕ್ಷೇತ್ರಜ್ಞ, ಆತ್ಮ ಮತ್ತು ಪರಮಾತ್ಮ ಇವುಗಳನ್ನು ತಿಳಿದುಕೊಂಡು ಮನುಷ್ಯನು ಜೀವನದ ಅಮೃತವನ್ನು ಸವಿಯಬಹುದು. ಎರಡನೆಯ ಅಧ್ಯಾಯದಲ್ಲಿ ವಿವರಿಸಿದಂತೆ ಜೀವಿಯು ನಿತ್ಯನು, ಶಾಶ್ವತನು. ಇದನ್ನೂ ಇಲ್ಲಿ ದೃಢಪಡಿಸಿದೆ. ಜೀವಿಯು ಹುಟ್ಟಿದ ನಿಶ್ಚಿತ ದಿನವಿಲ್ಲ. ಪರಮ ಪ್ರಭುವಿನಿಂದ ಅಭಿವ್ಯಕ್ತಿ ಪಡೆದ ಜೀವಾತ್ಮನ ಇತಿಹಾಸವನ್ನು ಗುರುತಿಸಲು ಯಾರಿಗೂ ಸಾಧ್ಯವಿಲ್ಲ. ಆದುದರಿಂದ ಅದು ಅ...