Bangalore, ಮೇ 15 -- ಹೊಸ ಸೂಪರ್‌ಮ್ಯಾನ್ ಸಿನಿಮಾಕ್ಕೆ ಕಾತರದಿಂದ ಕಾಯುತ್ತಿರುವವರು ಥ್ರಿಲ್ಲಾಗಿದ್ದಾರೆ. ಸೂಪರ್‌ಮ್ಯಾನ್ ಸಿನಿಮಾ ಬಿಡುಗಡೆ ದಿನಾಂಕ ಸನಿಹದಲ್ಲಿರುವುದು ಇವರ ಖುಷಿಗೆ ಒಂದು ಕಾರಣ. ನಿನ್ನೆಯಷ್ಟೇ ಬಿಡುಗಡೆಯಾದ ಸೂಪರ್‌ಮ್ಯಾನ್ ಟ್ರೈಲರ್ ಅಭಿಮಾನಿಗಳ ಖುಷಿಗೆ ಇನ್ನೊಂದು ಕಾರಣ. ನಟ ಡೇವಿಡ್ ಕೊರೆನ್ಸ್‌ವೆಟ್ ಐಕಾನಿಕ್ ಸೂಪರ್‌ಹೀರೋ ಪಾತ್ರದಲ್ಲಿ ನಟಿಸಿರುವ ಜೇಮ್ಸ್ ಗನ್ ನಿರ್ದೇಶನದ ಹೊಸ ಟ್ರೈಲರ್ ಬುಧವಾರ ಬಿಡುಗಡೆಯಾಗಿದೆ. ಈ ಟ್ರೈಲರ್‌ನಲ್ಲಿ ಮುಂದೆ ಬಿಡುಗಡೆಯಾಗುವ ಸಿನಿಮಾದಲ್ಲಿ ಏನಿರಲಿದೆ ಎಂಬ ಕೌತುಕಕ್ಕೆ ಉತ್ತರ ದೊರಕಿದೆ. ಈ ಬಾರಿ ಸೂಪರ್‌ಮ್ಯಾನ್ ಯುನೈಟೆಡ್ ಸ್ಟೇಟ್ಸ್‌ನ ಪ್ರತಿನಿಧಿಯಾಗಿ ಹೋರಾಡುತ್ತಿದ್ದಾನೆ. ಪೂರ್ಣ ಪ್ರಮಾಣದಲ್ಲಿ ಯುದ್ಧವನ್ನು ನಿಲ್ಲಿಸುವ ಜವಾಬ್ದಾರಿ ಆತನ ಮೇಲೆ ಇದೆ. ಹೀಗಾಗಿ, ಈತನ ಮೇಲೆ ಒತ್ತಡ ಹೆಚ್ಚಿದೆ.
ಸೂಪರ್‌ಮ್ಯಾನ್ ಟ್ರೈಲರ್ ಆರಂಭದಲ್ಲಿ ಲೋಯಿಸ್ ಲೇನ್ (ರಾಚೆಲ್ ಬ್ರಾನ್ಸಹನ್) ಸೂಪರ್‌ಮ್ಯಾನ್ (ಡೇವಿಡ್ ಕೊರೆನ್ಸ್‌ವೆಟ್)ನನ್ನು ಸಂದರ್ಶನ ಮಾಡುತ್ತಿದ್ದಾಳೆ. "...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.