Bengaluru, ಏಪ್ರಿಲ್ 2 -- ಮೆನೋಪಾಸ್ ಅಥವಾ ಮುಟ್ಟು ನಿಲ್ಲುವ ಹಂತದ ಬಗ್ಗೆ ಸ್ತ್ರೀ ರೋಗ ತಜ್ಞೆ ಡಾ ಶೀಲಾ ವಿ. ಮಾಣೆ ಬರಹ ಇಲ್ಲಿದೆ. ಭಾರತದಲ್ಲಿ ಮಹಿಳೆಯರು ಸಾಮಾನ್ಯವಾಗಿ ಸುಮಾರು 46.2ರ ಆಸುಪಾಸಿನ ವಯಸ್ಸಿನಲ್ಲಿ ಋತುಬಂಧ ಅಥವಾ ಮುಟ್ಟು ನಿಲ್ಲುವ ಅಥವಾ ಮೆನೋಪಾಸ್ ಹಂತವನ್ನು ತಲುಪುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಹಿಂದೆ ಮುಟ್ಟು ನಿಲ್ಲುವ ಸರಾಸರಿ ವಯಸ್ಸು 51 ಇತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರು ತಮ್ಮ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಜೀವನದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಋತುಬಂಧಕ್ಕೆ ಸಮೀಪಿಸುತ್ತಿರುವವರು ಮೆನೋಪಾಸ್ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದನ್ನು ನಿಭಾಯಿಸುವುದನ್ನು ಕಲಿಯಬೇಕು.

ಅಬಾಟ್ ಮತ್ತು ಇಪ್ಸೋಸ್ ಜಂಟಿಯಾಗಿ ನಡೆಸಿದ ಒಂದು ಸಮೀಕ್ಷೆಯಲ್ಲಿ ಶೇ.87ರಷ್ಟು ಜನರು ಮೆನೋಪಾಸ್ ಮಹಿಳೆಯರ ದೈನಂದಿನ ಜೀವನದ ಮೇಲೆ ಭಾರಿ ದೊಡ್ಡ ಪರಿಣಾಮ ...