ಭಾರತ, ಮೇ 10 -- fahadh faasil on Pushpa: ಟಾಲಿವುಡ್‌ ಅಂಗಳದಲ್ಲಿ ಸದ್ಯ ಪುಷ್ಪ 2 ಚಿತ್ರದ್ದೇ ಸುದ್ದಿ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಲು ರೆಡಿಯಾಗಿರುವ ಈ ಸಿನಿಮಾ, ಈಗಾಗಲೇ ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿದೆ. ಅಲ್ಲು ಅರ್ಜುನ್‌ ಅವರ ಮಾಸ್‌ ಅವತಾರ, ಮಲಯಾಳಿ ನಟ ಫಹಾದ್‌ ಫಾಸಿಲ್‌ ಗತ್ತು, ರಶ್ಮಿಕಾ ಮಂದಣ್ಣ ಬ್ಯೂಟಿ.. ನೋಡುಗರನ್ನು ಸೆಳೆದಿದೆ. ಇನ್ನೇನು ಬಿಡುಗಡೆಗೆ ಹತ್ತಿರವಿರುವ ಈ ಸಿನಿಮಾದ ಹಾಡೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು. ಸೋಷಿಯಲ್‌ ಮೀಡಿಯಾದಲ್ಲೂ ಈ ಹಾಡಿನ ರೀಲ್ಸ್‌ಗಳೂ ಸದ್ಯ ಟ್ರೆಂಡಿಂಗ್‌ನಲ್ಲಿವೆ. ಈ ನಡುವೆಯೇ ಇದೇ ಚಿತ್ರದ ನಟ ಫಹಾದ್‌ ಫಾಸಿಲ್‌ ಅವರ ಇತ್ತೀಚಿನ ಹೇಳಿಕೆಯೊಂದು ಸದ್ಯ ವೈರಲ್‌ ಆಗಿದೆ.

2021ರಲ್ಲಿ ಬಿಡುಗಡೆಯಾದ ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರದಲ್ಲಿ ಫಹಾದ್‌ ಫಾಸಿಲ್‌ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಗತ್ತು ತೋರಿಸಿದ್ದರು. ಮೊದಲ ಭಾಗದಲ್ಲಿ ಎಸ್‌ಪಿ ಭನ್ವರ್‌ ಸಿಂಗ್‌ ಶೇಖಾವತ್‌ ಪಾತ್ರದಲ್ಲಿ ಅವರು ಮಿಂಚು ಹರಿಸ...