ಭಾರತ, ಮಾರ್ಚ್ 28 -- ಭಾರತದಲ್ಲಿ ಕಬಡ್ಡಿ ಕ್ರೀಡೆಗಿರುವ ಕ್ರೇಜ್ ತುಂಬಾ ದೊಡ್ಡದು. ಕ್ರಿಕೆಟ್ ಅತಿ ಜನಪ್ರಿಯ ಕ್ರೀಡೆಯಾದರೂ, ಕಬಡ್ಡಿ ಇಷ್ಟಪಡುವವರ ಸಂಖ್ಯೆಯೂ ದೊಡ್ಡದಿದೆ. ಕರ್ನಾಟಕದಲ್ಲೂ ಕಬಡ್ಡಿ ದಿನೇ ದಿನೇ ಜನಮನ್ನಣೆ ಗಳಿಸುತ್ತಿದ್ದು, ಹಲವು ಭಾಗಗಳಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ನಡೆಸಲಾಗುತ್ತದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ವಿವಿಧ ಕ್ರೀಡೆಗಳ ಟೂರ್ನಿಗಳನ್ನು ನಡೆಸಲಾಗುತ್ತಿದೆ. ಇದೀಗ ಹೊನಲು ಬೆಳಕಿನ ಪಂದ್ಯಗಳನ್ನು ನಡೆಸುವ ಸೀಸನ್. ಅದರಂತೆಯೇ ಸುಳ್ಯದಲ್ಲಿ ನಡೆಯುತ್ತಿರುವ ಕಬಡ್ಡಿ ಟೂರ್ನಿಯ ಕುರಿತ ಸೋಷಿಯಲ್ ಮೀಡಿಯಾ ಪೋಸ್ಟ್ ಕೂಡಾ ಎಲ್ಲೆಡೆ ವೈರಲ್ ಆಗುತ್ತಿದೆ.
ಮಾರ್ಚ್ 29ರ ಶನಿವಾರ, ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ 'ಸುಳ್ಯ ಕಬಡ್ಡಿ ಉತ್ಸವ 2025' ನಡೆಯಲಿದ್ದು, ಘಟಾನುಘಟಿ ತಂಡಗಳು ಸ್ಪರ್ಧೆಯಲ್ಲಿ ಸೆಣಸಲಿವೆ. ಸಂಜೆ 5:30ರಿಂದ ಕಾರ್ಯಕ್ರಮ ನಡೆಯಲಿದೆ. ಕಬಡ್ಡಿ ಪಂದ್ಯಗಳನ್ನು ನೋಡಲು ಪ್ರೇಕ್ಷಕರಿಗೂ ಉಚಿತ ಪ್ರವೇಶವಿದೆ. ಹೀಗಾಗಿ ಜನರು ಹೋಗಿ ಪಂದ್ಯಗಳನ್ನು ಸವಿಯಬಹುದು.
ಅಂತಾ...
Click here to read full article from source
To read the full article or to get the complete feed from this publication, please
Contact Us.