ಭಾರತ, ಮಾರ್ಚ್ 20 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 19ರ ಸಂಚಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಸ್ ಇಳಿದ ಶ್ರಾವಣಿ, ಪದ್ಮನಾಭ ಒಂದು ಕಡೆ ಚಹಾ ಕುಡಿಯುತ್ತಾ ಉಭಯಕುಶಲೋಪರಿ ಮಾತನಾಡುತ್ತಾ ನಿಂತಿರುತ್ತಾರೆ. ಸುಬ್ಬು ಹಾಗೂ ವಿಶಾಲಾಕ್ಷಿ ಇಬ್ಬರೂ ಒಂದೇ ಲಾಡ್ಜ್‌ನಲ್ಲಿ ಫ್ರೆಶ್ಅಪ್‌ ಆಗಲು ರೂಮ್ ಮಾಡಿರುತ್ತಾರೆ. ಆದರೆ ಸುಬ್ಬಗೆ ತಾಯಿ ಬಂದಿರುವುದು ತಿಳಿದಿಲ್ಲ, ವಿಶಾಲುಗೆ ಮಗ ಬಂದಿರುವುದು ತಿಳಿದಿರುವುದಿಲ್ಲ. ಸುಬ್ರಹ್ಮಣ್ಯ ಸನ್ನಿಧಾನದ ಬಗ್ಗೆ ಮಾತನಾಡುತ್ತಾ ತಾವು ಕೂಡ ಫ್ರೆಶ್ ಆಗಲು ರೂಮ್ ಕಡೆ ಹೊರಡುತ್ತಾರೆ ಮಾವ-ಸೊಸೆ.

ಲಾಡ್ಜ್‌ನಲ್ಲಿ ಫ್ರೆಶ್‌ಅಪ್‌ ಆಗಿ ದೇವಸ್ಥಾನದ ಕಡೆ ಹೊರಡುವ ವಿಶಾಲಾಕ್ಷಿಗೆ ದಾರಿ ತಿಳಿಯುವುದಿಲ್ಲ. ಬಿಸಿಲು ಬೇರೆ ನೆತ್ತಿ ಎತ್ತರಕ್ಕೆ ಏರಿರುತ್ತದೆ. ಆಗ ಅವಳಿಗೆ ಹಿಂದೆಲ್ಲಾ ಮಗನ ಜೊತೆ ಬಂದಾಗ ಅವನು ಎಷ್ಟು ಜೋಪಾನವಾಗಿ ಕರೆದುಕೊಂಡು ಹೋಗುತ್ತಿದ್ದ ಎಂಬುದು ನೆನಪಾಗುತ್ತದೆ. ಆಗ ಎದುರಿಗೆ ಬರುವ ವ್ಯಕ್ತಿಯಲ್ಲಿ ದೇವಸ್ಥಾನಕ್ಕೆ ಯಾವ ಕಡ...